ಬೀದಿ ಬದಿ ವ್ಯಾಪಾರಿಗಳ ತಾತ್ಕಾಲಿಕ ಸಮಿತಿ ರಚನೆ

Formation of a temporary committee of street vendors
Formation of a temporary committee of street vendors
Published on

ಗುಳೇದಗುಡ್ಡ: ಬೀದಿ ಬದಿ ವ್ಯಾಪಾರಸ್ಥರು ಗುರುತಿನ ಚೀಟಿ, ಪ್ರಮಾಣ ಪತ್ರವನ್ನು ಪುರಸಭೆಯಿಂದ ಪಡೆದುಕೊಳ್ಳಬೇಕು. ಈಗ ಹತ್ತು ಜನರ ಒಳಗೊಂಡ ತಾತ್ಕಾಲಿಕ ಸಮಿತಿ ರಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭೆಯ ಡೇ ನಲ್ಮದ ಸಮುದಾಯ ಸಂಘಟನಾಧಿಕಾರಿ ಬಡೇಸಾಬ ಹುಲ್ಲಿಕೇರಿ ಹೇಳಿದರು.

ಪುರಸಭೆ ಕಚೇರಿಯಲ್ಲಿ ಬುಧವಾರ ನಡೆದ ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ ನಿಯಂತ್ರಣ ಮತ್ತು ಪರವಾನಗಿ ಯೋಜನೆಯ 2020ರ ಕುರಿತು ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ವ್ಯಾಪಾರಸ್ಥರು ಮಾತನಾಡಿ, ಪಟ್ಟಣದ ಭಾರತ ಮಾರ್ಕೆಟ್‌ನಲ್ಲಿ ಜನದಟ್ಟನೆ ಹೆಚ್ಚಾಗಿದೆ. ಶೌಚಗೃಹ ತೆರವುಗೊಳಿಸಲಾಗಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಮೊದಲಿದ್ದ ಸ್ಥಳದಲ್ಲಿಯೇ ಶೌಚಗೃಹ ನಿರ್ಮಿಸಬೇಕು. ಕುಡಿಯವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಕೆಳಗಿನ ಮಾರ್ಕೆಟ್‌ನಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಬೇಕು. ಬೀದಿ ಬದಿ ವ್ಯಾಪಾರಸ್ಥರಿಗೆ ಮೂಲ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಬೀದಿಬದಿ ವ್ಯಾಪಾರಸ್ಥರಿಗೆ ಶೀಘ್ರದಲ್ಲಿ ಅಗತ್ಯ ಸೌಲಭ್ಯ ಒದಗಿಸಲಾಗುವುದು ಎಂದು ಪುರಸಭೆ ಅಭಿಯಂತರ ಎಂ.ಜಿ. ಕಿತ್ತಲಿ ಹೇಳಿದರು. ಪುರಸಭೆ ಮ್ಯಾನೇಜರ್ ಎ.ಎಚ್. ಮುದ್ದೇಬಿಹಾಳ, ಪುರಸಭೆ ಸಿಬ್ಬಂದಿ ವೀರೇಶ ಹಿರೇಮಠ, ವಿಜಯಲಕ್ಷ್ಮೀ ಪೂಜಾರಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net