ಬೀದಿ ಬದಿ ವ್ಯಪಾರಿಗಳಿಗೆ ಎಫ್‌ಎಸ್‌ಎಸ್‌ಎಐ ತರಬೇತಿ.

ಬೀದಿ ಬದಿ ವ್ಯಪಾರಿಗಳಿಗೆ ಎಫ್‌ಎಸ್‌ಎಸ್‌ಎಐ ತರಬೇತಿ.
Published on

ಹಾಸನ: ಹಾಸನದ ನಗರ ಸಭೆ ಆವರಣದಲ್ಲಿ ಇತ್ತೀಚೆಗೆ ಡೇ ನಲ್ಮ್ ಯೋಜನೆಯಡಿ ಹಾಸನ ನಗರ ಸಭೆ ಮತ್ತು ನಾರಾಯಣ ತರಬೇತಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಬೀದಿ ಬದಿ ವ್ಯಪಾರಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಎಫ್‌ಎಸ್‌ಎಸ್‌ಎಐ ತರಬೇತಿ ಕಾರ್ಯಕ್ರಮವನ್ನು ನಗರಸಭೆ ಪೌರಾಯುಕ್ತ ನಗರಸಭೆಯ ಪರಮೇಶ್ವರಪ್ಪ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ನಾರಾಯಣ ತರಬೇತಿ ಸಂಸ್ಥೆಯ ಯಶ್‌ವಂತ್ 90 ಬೀದಿ ಬದಿ ವ್ಯಾಪಾರಿಗಳಿಗೆ ಸಂಪೂರ್ಣ ಮಾಹಿತಿ ನೀಡಿದರು.

ಕೌಶಲ್ಯಾಭಿವೃದ್ದಿ ಕಚೇರಿಯ ಜಿಲ್ಲಾ ಅಭಿಯಾನ ವ್ಯವಸ್ಥಾಪಕ ಡಾ. ರಾಜಶೇಖರ್ ಕನ್ನಾಳ್, ನಗರಸಭೆಯ ಸದಸ್ಯ ಮಂಜುನಾಥ್, ಜಿಲ್ಲಾ ಕೌಶಲ್ಯಾಭಿವೃದ್ದಿ ವ್ಯವಸ್ಥಾಪಕ ಕೋಮಲ ಎ.ಜೆ, ಚಿದಾನಂದ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net