ಬೀದರ್​ನಿಂದ ತಿರುಪತಿಗೆ ರೈಲು

Capture
Published on

ಬೀದರ್: ಬೀದರ್​ನಿಂದ ತಿರುಪತಿಗೆ ಇನ್ನೊಂದು ರೈಲು ಓಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಇದೇ ತಿಂಗಳಲ್ಲಿ ಎರಡೂ ರೈಲುಗಳು ಪ್ರಾಯೋಗಿಕವಾಗಿ ಸಂಚಾರ ನಡೆಸಲಿವೆ ಎಂದು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.

ಶನಿವಾರ ಮತ್ತು 23ರಂದು ನಾಂದೇಡ್-ತಿರುಪತಿ (07633) ನಾಂದೇಡ್ನಿಂದ ಮಧ್ಯಾಹ್ನ 12ಕ್ಕೆ ಹೊರಟು ಪೂಣರ್ಾ ಜಂಕ್ಷನ್, ಪರಭಣಿ, ಲಾತೂರ ರಸ್ತೆ, ಭಾಲ್ಕಿ ಮೂಲಕ ಬೀದರ್ಗೆ ಸಂಜೆ 6ಕ್ಕೆ ಬರಲಿದೆ. ಇಲ್ಲಿಂದ 6.02ಕ್ಕೆ ಹೊರಟು ವಿಕಾರಾಬಾದ್, ಚಿತ್ತಾಪುರ, ರೇಣಿಗುಂಟಾ ಜಂಕ್ಷನ್ ಮಾರ್ಗವಾಗಿ ಮರುದಿನ ಭಾನುವಾರ ಮತ್ತು 24ರಂದು ಬೆಳಗ್ಗೆ 8.30ಕ್ಕೆ ತಿರುಪತಿಗೆ ತಲುಪಲಿದೆ. 17 ಮತ್ತು 24ರಂದು ತಿರುಪತಿ-ನಾಂದೇಡ್ (07634) ರಾತ್ರಿ 9.10ಕ್ಕೆ ತಿರುಪತಿಯಿಂದ ಹೊರಟು ಮರುದಿನ ಬೆಳಗ್ಗೆ 8.58ಕ್ಕೆ ಬೀದರ್ಗೆ ತಲುಪಲಿದೆ. ಭಾಲ್ಕಿಗೆ 9.40 ಮತ್ತು ಸಂಜೆ 5.20ಕ್ಕೆ ನಾಂದೇಡ್ ತಲುಪಲಿದೆ ಎಂದು ಹೇಳಿದ್ದಾರೆ.

ಇದರೊಂದಿಗೆ 17, 24 ಮತ್ತು 31ರಂದು ತಿರುಪತಿ-ನಗರಸೋಲ್ (07637) ಬೆಳಗ್ಗೆ 7ಕ್ಕೆ ತಿರುಪತಿಯಿಂದ ಹೊರಟು ವಾಯಾ ಗುಂಟೂರ್, ಸಿಕಿಂದ್ರಾಬಾದ್, ಲಿಂಗಂಪಲ್ಲಿ, ವಿಕಾರಾಬಾದ್ ಮಾರ್ಗವಾಗಿ ಬೀದರ್ಗೆ ರಾತ್ರಿ 11ಕ್ಕೆ ತಲುಪಲಿದೆ, ಭಾಲ್ಕಿ ರಾತ್ರಿ 11.50, ಉದಗೀರ್, ಲಾತೂರ ಮಾರ್ಗವಾಗಿ ಮರುದಿನ ಮಧ್ಯಾಹ್ನ 1.20ಕ್ಕೆ ನಗರಸೋಲ್ ತಲುಪಲಿದೆ. 18, 25 ಹಾಗೂ ಆ.1ರಂದು ನಗರಸೋಲ್-ತಿರುಪತಿ (07638) ನಗರಸೋಲ್ನಿಂದ ರಾತ್ರಿ 10ಕ್ಕೆ ಹೊರಟು ಮರುದಿನ ಭಾಲ್ಕಿ (ಬೆಳಗ್ಗೆ 6.40), ಬೀದರ್ಗೆ ಬೆಳಗ್ಗೆ 7.10ಕ್ಕೆ ತಲುಪಲಿದೆ. ವಿಕರಾಬಾದ್, ಸಿಕಿಂದ್ರಾಬಾದ್, ಗುಂಟೂರ್, ರೇಣಿಗುಂಟಾ ಮೂಲಕ ತಿರುಪತಿಗೆ ಮಧ್ಯರಾತ್ರಿ 1ಕ್ಕೆ ತಲುಪಲಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net