

ಭಾಲ್ಕಿ: ಜಿಲ್ಲೆಯಲ್ಲಿ ಕರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುವ ಆತಂಕವಿದ್ದು, ತುರ್ತಾಗಿ ಬೀದರ್ನ ಮೆಡಿಕಲ್ ಕಾಲೇಜಿನಲ್ಲಿ ಕೋವಿಡ್-19 ಪರೀಕ್ಷಾ ಕೇಂದ್ರ ಆರಂಭಿಸಬೇಕು ಎಂದು ಶಾಸಕ ಈಶ್ವರ ಖಂಡ್ರೆ ಒತ್ತಾಯಿಸಿದ್ದಾರೆ.
ಪಟ್ಟಣದಲ್ಲಿ ಭಾನುವಾರ ವೈಯುಕ್ತಿಕವಾಗಿ ಮಾಸ್ಕ್ ವಿತರಿಸಿ ಮಾತನಾಡಿ. ಜಿಲ್ಲೆಯಲ್ಲಿ 13 ಜನರಿಗೆ ಸೋಂಕು ಕಾಣಿಸಿಕೊಂಡಿದ್ದು, ಭಯದ ವಾತಾವರಣ ನಿಮರ್ಾಣವಾಗಿದೆ. ಕಲಬುರಗಿ ತಪಾಸಣೆ ಕೇಂದ್ರದಲ್ಲಿ ಟೆಸ್ಟ್ ಕಿಟ್ ಸೇರಿ ಸೂಕ್ತ ವ್ಯವಸ್ಥೆ ಇಲ್ಲದ್ದಕ್ಕೆ ಜಿಲ್ಲೆಯ ಸುಮಾರು 100 ಶಂಕಿತರ ಗಂಟಲು ದ್ರವ, ರಕ್ತ ಮಾದರಿ ಪರೀಕ್ಷೆಗಾಗಿ ಸ್ಯಾಂಪಲ್ ಎರಡು ದಿನಗಳ ಹಿಂದೆ ಬೆಂಗಳೂರಿಗೆ ಕಳುಹಿಸಿ ಕೊಡಲಾಗಿದೆ. ವರದಿ ಬರಲು ವಿಳಂಬ ಆಗುತ್ತಿದ್ದು, ಶಂಕಿತರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದೆ ಎಂದರು.
ಸರ್ಕಾರ ಈ ವಿಷಯ ಗಂಭೀರವಾಗಿ ಪರಿಗಣಿಸಿ ಬೀದರ್ನಲ್ಲಿ ಪರೀಕ್ಷಾ ಕೇಂದ್ರ ಆರಂಭಿಸಬೇಕು. ಕಲಬುರಗಿ ಕೇಂದ್ರಕ್ಕೂ ಅಗತ್ಯ ಸೌಲಭ್ಯ ಒದಗಿಸಬೇಕು. ಕ್ಷೇತ್ರದ ಜನರ ಆರೋಗ್ಯದ ದೃಷ್ಟಿಯಿಂದ ವೈಯಕ್ತಿಕವಾಗಿ 20 ಸಾವಿರ ಮಾಸ್ಕ್ ವಿತರಿಸಲಾಗಿದೆ. ಜನರು ಮುಂಜಾಗ್ರತೆ ವಹಿಸಬೇಕು ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಅಶೋಕ ಮಡ್ಡೆ, ಸದಸ್ಯ ಬಸವರಾಜ ವಂಕೆ, ಮುಖಂಡ ಪ್ರಕಾಶ ಮಾಶೆಟ್ಟೆ, ಭಾತಂಬ್ರಾ ಗ್ರಾಪಂ ಮಾಜಿ ಉಪಾಧ್ಯಕ್ಷ ಮಹಾದೇವ ಬೇಲೂರೆ ಇದ್ದರು.