ಬೀದರ್​ನಲ್ಲಿ 9 ಜನರಿಗೆ ಕರೊನಾ ಪಾಸಿಟಿವ್

carona logo
Published on

ಬೀದರ್: ಜಿಲ್ಲೆಯಲ್ಲಿ ಕರೊನಾ ರಣಕೇಕೆ ತನ್ನ ಅಟ್ಟಹಾಸ ಮುಂದುವರಿಸಿದ್ದು, ಶುಕ್ರವಾರ 9 ಜನರಿಗೆ ಕರೊನಾ ಸೋಂಕು ದೃಢಪಟ್ಟಿದೆ. ಭಾಲ್ಕಿ ತಾಲ್ಲೂಕಿನಲ್ಲಿ ವ್ಯಾಪಿಸಿರುವ ಸೋಂಕು, ಭಾತಂಬ್ರಾ ಗ್ರಾಮದ ಮೂವರಿಗೆ ಹಾಗೂ ಹಲಸಿ(ಎಲ್) ಗ್ರಾಮದ ಒಬ್ಬರಿಗೆ ಸೋಂಕು ತಗುಲಿರುವುದು ಖಚಿತವಾಗಿದೆ. ಹುಮನಾಬಾದ್ ತಾಲ್ಲೂಕಿನ ಹಳ್ಳಿಖೇಡ್(ಬಿ) ಪಟ್ಟಣದಲ್ಲಿ ಇಬ್ಬರಿಗೆ ಪಾಸಿಟಿವ್ ಬಂದಿದೆ. ಭಾಲ್ಕಿ ತಾಲೂಕಿನ ಚಳಕಾಪುರದಲ್ಲಿ ಎರಡು ದಿನಗಳ ಹಿಂದಷ್ಟೇ ಒಬ್ಬನಿಗೆ ಸೋಂಕು ತಗುಲಿತ್ತು. ಈಗ ಮತ್ತೆ ನಾಲ್ವರಿಗೆ ವೈರಸ್ ಅಂಟಿದೆ. ಇದರೊಂದಿಗೆ ಭಾಲ್ಕಿ ತಾಲ್ಲೂಕಿನಲ್ಲಿ ಸೋಂಕಿತರ ಸಂಖ್ಯೆ 5ಕ್ಕೇರಿದೆ. ಬೀದರ್ ನಗರದ ಬಸವನಗರ, ದರ್ಜಿ ಗಲ್ಲಿ ಹಾಗೂ ಚೌಬಾರಾ ಹತ್ತಿರದ ತಲಾ ಒಬ್ಬರಿಗೆ ಸೋಂಕು ತಗುಲಿದೆ ಎಂದು ಮೂಲಗಳು ತಿಳಿಸಿವೆ. ಈವರೆಗೆ ಬೀದರ್​ ಜಿಲ್ಲೆಯಲ್ಲಿ   76 ಸೋಂಕಿತರ‌ ಪತ್ತೆಯಾಗಿದ್ದು, ಇಬ್ಬರನ್ನು ಕರೊನಾ ಬಲಿ ಪಡೆದಿದ್ದು, 21 ಮಂದಿ ಗುಣಮುಖ‌ರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net