ಬೀದರ್​ನ ಬಡಾವಣೆ ರಸ್ತೆಗಳಿಗೆ ಬೇಲಿ

bidar road block
Published on

ಬೀದರ್: ನಗರದ ವಿವಿಧ ಬಡಾವಣೆಗಳ ಪ್ರಮುಖ ರಸ್ತೆಗಳಿಗೆ ಈಗ ಜನರು ಬೇಲಿ ಹಾಕಿಕೊಳ್ಳುತ್ತಿದ್ದಾರೆ. ನಗರದಲ್ಲಿ ಕರೊನಾ ಸೋಂಕು ಪ್ರಕರಣ ಹೆಚ್ಚುತ್ತಿರುವುದರಿಂದ ಆತಂಕಗೊಂಡ ಅನೇಕ ಬಡಾವಣೆಗಳ ಜನರು, ಸ್ವಯಂ ಇಚ್ಛೆಯಿಂದ ಅಲ್ಲಲ್ಲಿ ರಸ್ತೆಗಳನ್ನು ಬಂದ್ ಮಾಡಿ ಸಂಚಾರಕ್ಕೆ ನಿರ್ಬಂಧ ಹೇರುತ್ತಿದ್ದಾರೆ. ನಗರದ ಆರ್ದಶ ಕಾಲನಿ, ವಿದ್ಯಾನಗರ, ಗುರುನಗರ, ಜ್ಯೋತಿ ಕಾಲನಿ, ಎಸ್ಬಿಎಚ್ ಕಾಲನಿ, ಶರಣ ನಗರ, ಬಸವನಗರ, ಗುಂಪಾ ಸೇರಿ ಅನೇಕ ಬಡಾವಣೆಗಳ ಜನರು ಇದಕ್ಕೆ ಸೈ ಎಂದಿದ್ದಾರೆ. ತಮ್ಮ ಬಡಾವಣೆಗೆ ಬರುವ ರಸ್ತೆಗಳಿಗೆ ಕಲ್ಲು ಹಾಕಿ, ಕಟ್ಟಿಗೆ ಕಟ್ಟಿ ಬಂದ್ ಮಾಡುತ್ತಿದ್ದಾರೆ. ಯಾರೂ ಈ ಕಡೆ ಸಂಚರಿಸದಂತೆ ನೋಡಿಕೊಳ್ಳುತ್ತಿದ್ದಾರೆ. ಹೊಸಬರಿಗೆ ನೋ ಎಂಟ್ರಿ ಎಂದಿದ್ದಾರೆ. ತರಕಾರಿ, ಹಣ್ಣು ಮಾರಾಟ ಮಾಡುವ ಭಂಡಿ, ವಾಹನಗಳಿಗೂ ಬಿಡುತ್ತಿಲ್ಲ. ನಗರದಲ್ಲೇ 11 ಕರೊನಾ ಪ್ರಕರಣಗಳು ಪತ್ತೆ ಆಗಿರುವುದು ಸ್ಥಳೀಯರ ಆತಂಕ ಹೆಚ್ಚಿದೆ. ಇದರಿಂದ ವಿವಿಧ ಬಡಾವಣೆಯವರು ತಮ್ಮ ಸುರಕ್ಷತೆ, ಮುಂಜಾಗ್ರತೆ ದೃಷ್ಟಿಯಿಂದ ರಸ್ತೆಗಳು ಬಂದ್ ಮಾಡಿಕೊಳ್ಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net