

ಬೀದರ್: ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಚುನಾವಣೆ ಪ್ರಕ್ರಿಯೆ ಆರಂಭವಾಗಿದ್ದು, ನಾಮಪತ್ರ ಸಲ್ಲಿಕೆ ಕೊನೇ ದಿನವಾದ ಸೋಮವಾರ ಜಿಲ್ಲಾಧ್ಯಕ್ಷ ಸೇರಿ ಎಲ್ಲ ಸ್ಥಾನಗಳಿಗೆ ತಲಾ ಒಬ್ಬರೇ ಉಮೇದುವಾರಿಕೆ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯಾಗಿದ್ದು, ಘೋಷಣೆಯಷ್ಟೇ ಬಾಕಿ ಉಳಿದಿದೆ.
ಜಿಲ್ಲಾಧ್ಯಕ್ಷ, ಮೂವರು ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಮೂವರು ಕಾರ್ಯದರ್ಶಿ, ಕೋಶಾಧ್ಯಕ್ಷ ಹಾಗೂ 15 ಕಾರ್ಯಕಾರಿ ಸಮಿತಿಗೆ ಚುನಾವಣೆ ನಡೆಯುತ್ತಿದ್ದು, ಎಲ್ಲ ಸ್ಥಾನಗಳಿಗೆ ಒಬ್ಬರಂತೆ ಸೋಮವಾರ ವಾತರ್ಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಅಶೋಕಕುಮಾರ ಕರಂಜೆ, ರಾಜ್ಯ ಪರಿಷತ್ ಸ್ಥಾನಕ್ಕೆ ಬಸವರಾಜ ಕಾಮಶೆಟ್ಟಿ, ಉಪಾಧ್ಯಕ್ಷ ಮೂರು ಸ್ಥಾನಕ್ಕೆ ಶ್ರೀನಿವಾಸ ಚೌಧರಿ, ನಾಗಶೆಟ್ಟಿ ಧರಂಪುರ, ಡಿ.ಕೆ. ಗಣಪತಿ, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಶಿವಕುಮಾರ ಸ್ವಾಮಿ, ಕಾರ್ಯದಶರ್ಿ ಮೂರು ಸ್ಥಾನಕ್ಕೆ ಪೃಥ್ವಿರಾಜ್ ಎಸ್., ಸುನೀಲ ಕುಲಕಣರ್ಿ, ಶ್ರೀಕಾಂತ ಬಿರಾದಾರ ಹಾಗೂ ಕೋಶಾಧ್ಯಕ್ಷ ಸ್ಥಾನಕ್ಕೆ ಎಂ.ಪಿ.ಮುದಾಳೆ ನಾಮಪತ್ರ ಸಲ್ಲಿಸಿದರು.
ಕಾರ್ಯಕಾರಿ ಮಂಡಳಿ ಸದಸ್ಯ ಸ್ಥಾನಕ್ಕಾಗಿ ಯಾದುಲ್ಲಾ ಹುಸೇನಿ, ಸಂತೋಷ ಚಟ್ಟಿ, ಶಿವಕುಮಾರ ವಣಗಿರೆ, ರೇವಣಸಿದ್ದ ಸ್ವಾಮಿ ಸೇರಿ 15 ನಾಮಪತ್ರ ಸಲ್ಲಿಸಿದರು. ಎಲ್ಲ ಸ್ಥಾನಗಳಿಗೆ ತಲಾ ಒಬ್ಬರು ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯಾಗಲಿದ್ದು, ಅಧಿಕೃತವಾಗಿ 27ರಂದು ಮಧ್ಯಾಹ್ನ 3.30ಕ್ಕೆ ಘೋಷಿಸಿ ಪ್ರಮಾಣಪತ್ರ ವಿತರಿಸುವುದಾಗಿ ಚುನಾವಣಾಧಿಕಾರಿ ದೀಪಕ ಮನ್ನಳ್ಳಿ ತಿಳಿಸಿದ್ದಾರೆ.