ಬೀದರ್ ಹಸಿರೀಕರಣಕ್ಕೆ ಅನುದಾನ ಕೊಡಿ

Anand Singh visit
Published on

ಬೀದರ್: ಜಿಲ್ಲೆಯ ಹಸಿರೀಕರಣಕ್ಕೆ 50 ಲಕ್ಷ ರೂ. ವಿಶೇಷ ಅನುದಾನ ಒದಗಿಸಬೇಕು ಎಂದು ಬಿಜೆಪಿ ರಾಜ್ಯ ಕಾರ್ಯಕಾರಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಅರಣ್ಯ ಸಚಿವ ಆನಂದಸಿಂಗ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿ, ತಾಪಮಾನ ಹೆಚ್ಚಿರುವ ಬೀದರ್ ಜಿಲ್ಲೆಯಲ್ಲಿ ಅರಣ್ಯೀಕರಣ ಕಾರ್ಯ ಹೆಚ್ಚಾಗಿ ನಡೆಯಬೇಕಿದೆ. ಸಸಿಗಳನ್ನು ನೆಟ್ಟು ಹಸಿರೀಕರಣಕ್ಕೆ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಸಾಕಷ್ಟು ಸ್ಥಳಾವಕಾಶ ಇದೆ. ನಗರದ ರಸ್ತೆ ಬದಿ, ವಿಭಜಕಗಳ ನಡುವೆ ಹಾಗೂ ಉದ್ಯಾನಗಳಲ್ಲಿ 50 ಸಾವಿರ ಸಸಿಗಳನ್ನು ನೆಡಲು ಸಾಮಾಜಿಕ ಅರಣ್ಯ ವಿಭಾಗಕ್ಕೆ 50 ಲಕ್ಷ ರೂ. ಅನುದಾನ ಕಲ್ಪಿಸುವಂತೆ ಕೋರಿದರು.

ಜಿಲ್ಲಾಡಳಿತ ವಿಭಜಕದ ನಡುವೆ ಅಲಂಕಾರಿಕ ಸಸಿಗಳನ್ನು ನೆಟ್ಟು ಬೀದರ್ ಹೊರವಲಯದ 19 ಕಿಮೀ ರಿಂಗ್ ರಸ್ತೆ ಸುಂದರೀಕರಣ ಯೋಜನೆಗೆ ಈಗಾಗಲೇ ಚಾಲನೆ ನೀಡಿದೆ. ಅನುದಾನ ಒದಗಿಸಿದರೆ ಇಂತಹ ಕೆಲಸಗಳಿಗೆ ನೆರವಾಗಲಿದೆ ಎಂದು ಗಮನ ಸೆಳೆದಿದ್ದಾರೆ. ನಾಗಮಾರಪಳ್ಳಿ ಮನವಿಗೆ ಸ್ಪಂದಿಸಿದ ಸಚಿವರು, ಅನುದಾನ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net