ಬೀದರ್-ಮಚಲಿಪಟ್ನಂ ರೈಲು ಪ್ರಾರಂಭ

railway-2
Published on

ಬೀದರ್: ಬೀದರ್-ಮಚಲಿಪಟ್ನಂ ರೈಲ್ವೆ ಪುನರ್ ಆರಂಭಕ್ಕೆ ರೈಲ್ವೆ ಇಲಾಖೆ ಅನುಮತಿ ನೀಡಿದೆ ಎಂದು ಸಂಸದ ಭಗವಂತ ಖೂಬಾ ತಿಳಿಸಿದ್ದಾರೆ. ಕರೊನಾದಿಂದ ಸ್ಥಗಿತಗೊಂಡಿದ ರೈಲ್ವೆಗಳು ಒಂದೊಂದಾಗಿ ಆರಂಭವಾಗುತ್ತಿವೆ. ಇತ್ತೀಚೆಗೆ ಬೀದರ್-ಯಶವಂತಪುರ (ಬೆಂಗಳೂರು) ರೈಲು ಸೇವೆ ಪ್ರಾರಂಭವಾಗಿದ್ದು, ಇದೀಗ ಮಚಲಿಪಟ್ನಂ ರೈಲ್ವೆ ಮಾರ್ಗವು ಡಿ. 1 ರಂದು ಆರಂಭವಾಗುತ್ತಿದೆ ಎಂದು ಭಾನುವಾರ ಇಲ್ಲಿ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರಾತ್ರಿ 8.45ಕ್ಕೆ ಮಚಲಿಪಟ್ನಂನಿಂದ ಹೊರಡುವ ರೈಲು ಮರು ದಿನ ಬೆಳಗ್ಗೆ 7.40ಕ್ಕೆ ಬೀದರ್ ತಲುಪಲಿದೆ. ರಾತ್ರಿ 7.30ಕ್ಕೆ ಬೀದರ್ನಿಂದ ಹೊರಡುವ ರೈಲು ಮರುದಿನ ಬೆಳಗ್ಗೆ 6.20ಕ್ಕೆ ಮಚಲಿಪಟ್ನಂ ತಲುಪಲಿದೆ. ರಾತ್ರಿ 8.40ಕ್ಕೆ ವಿಕಾರಾಬಾದ್ಗೆ ಇದು ತೆರಳಲಿದ್ದು, ಅಲ್ಲಿಂದ ರಾತ್ರಿ 9.10ಕ್ಕೆ ಮುಂಬೈಗೆ ತೆರಳಲು (17032 ರೈಲು ಸಂಖ್ಯೆ), ಮಧ್ಯರಾತ್ರಿ 12.30ಕ್ಕೆ ಕೊಲ್ಹಾಪುರ (11303)ಕ್ಕೆ ರೈಲು ಸಿಗಲಿದೆ. ರಾತ್ರಿ 10.10ಕ್ಕೆ ಸಿಕಿಂದ್ರಾಬಾದ್ ಗೆ ತಲುಪಿದ ನಂತರ, 11ಕ್ಕೆ ದೆಹಲಿ- ಸಿಕಿಂದ್ರಾಬಾದ್ (ದಕ್ಷಿಣ ಎಕ್ಸ್ ಪ್ರೆಸ್) ರೈಲು ಸೇವೆ ಸಹ ಪಡೆಯಬಹುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net