ಬೀದರ್ ನಲ್ಲಿ ನಾಟಕೋತ್ಸವ 4ರಂದು

Vijaykumar Sonare
Published on

ಬೀದರ್: ಜಿಲ್ಲಾ ಜಾನಪದ ಕಲಾವಿದರ ಬಳಗ, ಅಖಿಲ ಕರ್ನಾಟಕ ಕಲಾವಿದರ ಒಕ್ಕೂಟದ, ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಾ. 4ರಿಂದ 7ರವರೆಗೆ ನಗರದ ರಂಗಮಂದಿರದಲ್ಲಿ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ.

ಸಾಮಾಜಿಕ, ಧಾರ್ಮಿಕ, ಐತಿಹಾಸಿಕ, ಪೌರಾಣಿಕ ನಾಟಕಗಳ ಪ್ರದರ್ಶನ ನಡೆಯಲಿವೆ. ಈ ಮೂಲಕ ಆಧುನಿಕ ಯುಗದಲ್ಲಿ ನಶಿಸಿ ಹೋಗುತ್ತಿರುವ ನಾಟಕ ಕಲೆಯನ್ನು ಉಳಿಸಿ, ಬೆಳೆಸಲು ಪ್ರಯತ್ನ ಮಾಡಲಾಗುತ್ತಿದೆ. ಪ್ರವೇಶ ಉಚಿತ ಇದೆ ಎಂದು ಅಖಿಲ ಕರ್ನಾಟಕ ಕಲಾವಿದರ ಒಕ್ಕೂಟದ ಜಿಲ್ಲಾ ಅಧ್ಯಕ್ಷ ವಿಜಯಕುಮಾರ ಸೋನಾರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

4ರಂದು ಸಾಣೇಹಳ್ಳಿ ಶಿವ ಸಂಚಾರ ತಂಡ ಜೀವ ಇದ್ದರೆ ಜೀವನ (ಕರೊನಾ ಕುರಿತು), 5ರಂದು ಶರಣ ಡೋಹರ ಕಕ್ಕಯ್ಯ, 6ರಂದು ಬಳ್ಳಾರಿಯ ಪುರುಷೋತ್ತಮ ಹಂದ್ಯಾಳ ತಂಡ ದನ ಕಾಯುವವರ ದೊಡ್ಡಾಟ ಹಾಗೂ 7ರಂದು ಮುತ್ತ್ಯಾನ ಬಬಲಾದ ಶೀ ಚನ್ನವೀರೇಶ್ವರ ನಾಟ್ಯ ಸಂಘದಿಂದ ರತ್ನಮಾಂಗಲ್ಯ ನಾಟಕ ಪ್ರದರ್ಶನವಾಗಲಿವೆ. ಎಲ್ಲ ನಾಟಕಗಳು ಸಂಜೆ 5ಕ್ಕೆ ಆರಂಭವಾಗಲಿವೆ ಎಂದು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತೆ, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಅವರಿಗೆ ವಿಶೇಷ ಸನ್ಮಾನವಿದೆ ಎಂದು ಹೆಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net