ಬೀದರ್ ನಲ್ಲಿ ಜಾಸ್ತಿ ಸದಸ್ಯರ ನೋಂದಣಿ

jagtik lingayat Mahasabha Photo
Published on

ಬೀದರ್: ಜಾಗತಿಕ ಲಿಂಗಾಯತ ಮಹಾಸಭಾಕ್ಕೆ ರಾಜ್ಯದಲ್ಲೇ ಬೀದರ್ನಲ್ಲಿ ಅತಿ ಹೆಚ್ಚು 2000 ಸದಸ್ಯತ್ವ ನೋಂದಣಿ ಮಾಡಿಸಲಾಗಿದೆ ಎಂದು ಮಹಾಸಭಾ ಜಿಲ್ಲಾಧ್ಯಕ್ಷ ಬಸವರಾಜ ಧನ್ನೂರ ಹೇಳಿದರು.

ನಗರದ ಗಾಂಧಿಗಂಜ್ ಬಸವೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಜರುಗಿದ ಮಹಾಸಭಾದ ಸಭೆಯಲ್ಲಿ ಮಾತನಾಡಿ, ಬರುವ ಜನವರಿಯಲ್ಲಿ ಇಲ್ಲಿ ಮಹಾಸಭಾ ಜಿಲ್ಲಾ ಘಟಕ ಉದ್ಘಾಟಿಸಲಾಗುವುದು. ಮಹಿಳಾ ಘಟಕ, ಯುವ ಘಟಕ, ಕಾನೂನು ಘಟಕ ಹಾಗೂ ತಾಲ್ಲೂಕು ಘಟಕಗಳ ಸಂಯೋಜಕರ ಘೋಷಣೆಯನ್ನೂ ಮಾಡಲಾಗುವುದು ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಲಿಂಗಾಯತ ಮಹಾಸಭಾ ಬಲಪಡಿಸಬೇಕಾಗಿದೆ. ಬರುವ ದಿನಗಳಲ್ಲಿ ಬಸವ ಧರ್ಮವನ್ನು ಇಡೀ ವಿಶ್ವವೇ ಅಪ್ಪಿಕೊಳ್ಳಲಿದೆ ಎಂದರು.

ಹುಲಸೂರಿನ ಶ್ರೀ ಶಿವಾನಂದ ಸ್ವಾಮೀಜಿ ಮಾತನಾಡಿ, ನವದೆಹಲಿಯಲ್ಲಿ ನಿರ್ಮಿಸುತ್ತಿರುವ ನೂತನ ಸಂಸತ್ ಗೆ ಅನುಭವ ಮಂಟಪ ಎಂದು ಹೆಸರಿಡಬೇಕು ಎಂದು ಬೇಡಿಕೆ ಮಂಡಿಸಿದರು.

ಡಾ.ಗಂಗಾಂಬಿಕೆ ಅಕ್ಕ, ಶರಣಪ್ಪ ಮಿಠಾರೆ, ಬಸವರಾಜ ಪಾಟೀಲ್ ಹಾರೂರಗೇರಿ, ರಾಜೇಂದ್ರಕುಮಾರ ಗಂದಗೆ ಮಾತನಾಡಿದರು. ಬಿಡಿಎ ನೂತನ ಅಧ್ಯಕ್ಷ ಬಾಬು ವಾಲಿ ಅವರನ್ನು ಸನ್ಮಾನಿಸಲಾಯಿತು. ಶ್ರೀ ಶಿವಾನಂದ ದೇವರು, ಸೋಮಶೇಖರ ಪಾಟೀಲ್ ಗಾದಗಿ, ಕುಶಾಲರಾವ ಪಾಟೀಲ್ ಖಾಜಾಪುರ, ಶಂಕ್ರೆಪ್ಪ ಹೊನ್ನಾ, ರಮೇಶ ಪಾಟೀಲ್ ಸೋಲಪುರ, ಆನಂದ ದೇವಪ್ಪ, ಚಂದ್ರಕಾಂತ ಮಿರ್ಚಿ, ಚಂದ್ರಪ್ಪ ಬಿರಾದಾರ, ಮೇನಕಾ ಪಾಟೀಲ್ ಇದ್ದರು. ರಾಜೇಂದ್ರ ಜೊನ್ನಿಕೇರಿ ಸ್ವಾಗತಿಸಿದರು. ಸುರೇಶ ಸ್ವಾಮಿ ನಿರೂಪಣೆ ಮಾಡಿದರು. ನಾಗಶೆಟ್ಟಿ ಶೆಟಕಾರ ವಂದಿಸಿದರು.

ಪದಾಧಿಕಾರಿಗಳ ಪಟ್ಟಿ ಬಿಡುಗಡೆ
ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಡಾ. ಬಸವಲಿಂಗ ಪಟ್ಟದ್ದೇವರು (ಗೌರವಾಧ್ಯಕ್ಷ), ಶ್ರೀ ಶಿವಾನಂದ ಸ್ವಾಮೀಜಿ, ಶ್ರೀ ಸಿದ್ರಾಮೇಶ್ವರ ಸ್ವಾಮೀಜಿ, ಶ್ರೀ ಗುರುಬಸವ ಪಟ್ಟದ್ದೇವರು, ಶ್ರೀ ಬೆಲ್ದಾಳ ಸಿದ್ಧರಾಮ ಶರಣರು, ಅಕ್ಕ ಅನ್ನಪೂರ್ಣ, ಡಾ. ಗಂಗಾಂಬಿಕೆ ಅಕ್ಕ, ಬಸವಪ್ರಭು ಸ್ವಾಮೀಜಿ, ಪಂಚಯ್ಯ ಸ್ವಾಮಿ, ಶ್ರೀ ಶಿವಕುಮಾರ ಸ್ವಾಮೀಜಿ, ಶ್ರೀ ಪಂಚಾಕ್ಷರಿ ಸ್ವಾಮೀಜಿ (ಗೌರವ ಮಾರ್ಗದರ್ಶಕರು), ಸಿದ್ದಯ್ಯ ಕಾವಡಿ, ಶಂಕರೆಪ್ಪ ಹೊನ್ನಾ (ಹಿರಿಯ ಉಪಾಧ್ಯಕ್ಷರು), ಸೋಮಶೇಖರ ಪಾಟೀಲ್, ಬಾಬು ವಾಲಿ, ಶರಣಪ್ಪ ಮಿಠಾರೆ (ಉಪಾಧ್ಯಕ್ಷರು), ರಾಜೇಂದ್ರ ಜೊನ್ನಿಕೇರಿ (ಮಹಾ ಪ್ರಧಾನ ಕಾರ್ಯದರ್ಶಿ), ರಾಜೇಂದ್ರಕುಮಾರ ಗಂದಗೆ (ಪ್ರಧಾನ ಕಾರ್ಯದರ್ಶಿ), ಆನಂದ ದೇವಪ್ಪ, ಸುರೇಶಕುಮಾರ ಸ್ವಾಮಿ, ಬಸವರಾಜ ಪಾಟೀಲ್ ಹಾರೂರಗೇರಿ (ಕಾರ್ಯದರ್ಶಿಗಳು), ವೀರಭದ್ರಪ್ಪ ಬುಯ್ಯಾ (ಖಜಾಂಚಿ). ಬಸವರಾಜ ಬುಳ್ಳಾ, ಬಿ.ಜಿ.ಶೆಟಕಾರ, ಎಸ್.ಬಿ. ಬಿರಾದಾರ, ಕಾಶೀನಾಥ ಬೆಲ್ದಾಳೆ, ಪ್ರಭುರಾವ ವಸ್ಮತೆ, ಗುರುನಾಥ ಕೊಳ್ಳುರ್, ಕಲ್ಲಪ್ಪ ಉಪ್ಪೆ, ರವೀಂದ್ರ ಮೀಸೆ, ಮಡಿವಾಳಪ್ಪ ಗಂಗಶೆಟ್ಟಿ, ನಾಗಶೆಟ್ಟಿ ದಾಡಗಿ, ವಿಶ್ವನಾಥಪ್ಪ ಬಿರಾದಾರ, ಸೋಮನಾಥಪ್ಪ ಅಷ್ಟೂರೆ, ಕಾಶಪ್ಪ ಬಾಲಕಿಲೆ, ಡಾ.ಎಸ್.ಬಿ. ದುರ್ಗೆ, ಕಂಟೆಪ್ಪ ದಾನಾ, ಸೋಮನಾಥ ಯಾಳವಾರ, ವಿಶ್ವನಾಥ ಕಾಜಿ, ಸಿ.ಎಸ್.ಪಾಟೀಲ್ (ಗೌರವ ಸಲಹೆಗಾರರು), ಕುಶಾಲರಾವ ಪಾಟೀಲ್ ಖಾಜಾಪುರ, ಹಾವಶೆಟ್ಟಿ ಪಾಟೀಲ್, ರಾಜಶೇಖರ ಮಂಗಲಗಿ, ಸಂಜುಕುಮಾರ ಪಾಟೀಲ್, ಉಮೇಶ ಗಾಯತೊಂಡ, ಜೈರಾಜ ಖಂಡ್ರೆ, ಭರತ ಶೆಟಕಾರ, ಬಾಬುರಾವ ದಾನಿ, ಕಂಟೆಪ್ಪ ಗಂದಿಗುಡಿ, ಬಸವರಾಜ ಜಕ್ಕಾ (ಪದನಿಮಿತ್ತ ಸದಸ್ಯರು). ಮಹಿಳಾ ಘಟಕ ಉಸ್ತುವಾರಿ: ಮೇನಕಾ ಪಾಟೀಲ್, ಸುಲೋಚನಾ ಪಟ್ನೆ, ಉಷಾ ಮಿರ್ಚೆ, ವಿಜಯಲಕ್ಷ್ಮೀ ಕೌಟಗೆ, ಶಾಂತಾದೇವಿ ಬಿರಾದಾರ, ಜಯಶ್ರೀ ಸುಕಾಲೆ, ಸುಮನ್ ಕಮಠಾಣೆ, ನಂದಾ ಪಾಟೀಲ್, ಸುಮನ್ ಬಿ. ಪಾಟೀಲ್. ಯುವ ಘಟಕ ಉಸ್ತುವಾರಿ: ರವಿ ಪಾಪಡೆ, ಸಿದ್ರಾಮ ಶೆಟಕಾರ, ಮಲ್ಲಿಕಾರ್ಜುನ ಶೆಟಕಾರ, ಬಸವರಾಜ ಭತಮುರ್ಗೆ, ಸಾಯಿನಾಥ ತೇಗಂಪುರ, ಶಿವಕುಮಾರ ಹಿಂದಾ, ಶಿವಕುಮಾರ ನಾವದಗೆ, ಗುರುಪಾದಪ್ಪ ಸಿರ್ಸೆ, ಆನಂದ ಪಾಟೀಲ್, ಬಸವಕಿರಣ ಪಾಟೀಲ್ ಪ್ರಚಾರ ಸಮಿತಿ ಉಸ್ತುವಾರಿ: ಯೋಗೇಂದ್ರ ಯದಲಾಪುರೆ. ಕಚೇರಿ ಮೇಲುಸ್ತುವಾರಿ: ಮಲ್ಲಿಕಾರ್ಜುನ ಪಂಚಾಕ್ಷರಿ.

ಎಲ್ಲ ಬಸವ ಪರ ಮಠಾಧೀಶರು, ಸಂಘಟನೆಗಳು ಹಾಗೂ ಸಮಸ್ತ ಬಸವ ಭಕ್ತರನ್ನು ಒಗ್ಗೂಡಿಸಿ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗೆ ಹೋರಾಟ ನಡೆಸಲು ಮಹಾಸಭಾ ಅಸ್ತಿತ್ವಕ್ಕೆ ತರಲಾಗಿದೆ. ಬೀದರ್ನಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ನೋಂದಣಿ ಮಾಡಲಾಗಿದೆ.| ಬಸವರಾಜ ಧನ್ನೂರಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net