ಬೀದರ್ ನಲ್ಲಿ ಏರ್ ಶೋ ನಡೆಸಿ

khuba meet rajnath singh
Published on

ಬೀದರ್: ಇಲ್ಲಿಯ ವಾಯುಪಡೆ ತರಬೇತಿ ಕೇಂದ್ರದಲ್ಲಿ ಏರ್ ಶೋ ಆಯೋಜಿಸಬೇಕು ಎಂದು ಸಂಸದ ಭಗವಂತ ಖೂಬಾ ಅವರು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರಲ್ಲಿ ಮನವಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಶುಕ್ರವಾರ ಸಿಂಗ್ ಅವರನ್ನು ಭೇಟಿ ಮಾಡಿ ಚರ್ಚಿಸಿ, ಈ ಸಂಬಂಧ ಮನವಿಪತ್ರ ಸಲ್ಲಿಸಿದರು. ಬೀದರ್ ನಲ್ಲಿ ಇರುವ ವಾಯುಪಡೆ ತರಬೇತಿ ಕೇಂದ್ರ ದೇಶದ ಎರಡನೇ ಅತಿ ದೊಡ್ಡ ಕೇಂದ್ರವಾಗಿದೆ. ಇಲ್ಲಿ ಏರ್ ಶೋ ನಡೆಸುವ ಮೂಲಕ ಕೇಂದ್ರದ ಖ್ಯಾತಿ ಹೆಚ್ಚಿಸುವ, ಜಿಲ್ಲೆಯ ಪ್ರವಾಸೋದ್ಯಮ ಸಹ ಹೆಚ್ಚಿಸುವ ಕೆಲಸ ಮಾಡುವಂತೆ ಗಮನ ಸೆಳೆದಿದ್ದಾರೆ.

ಬೀದರ್ ವಾಯುಪಡೆ ಕೇಂದ್ರವು ಸೂರ್ಯಕಿರಣ ಟೀಮ್ ಹೊಂದಿದೆ. ಹಾಕ್ ಯುದ್ಧ ವಿಮಾನಗಳ ತರಬೇತಿ ಸ್ಕ್ವಾಡ್ರನ್ ಸಹ ಹೊಂದಿದೆ. ವೆಪನ್ ಸಿಸ್ಟಮ್ ಆಪರೇಟರ್ಸ್ ಶಾಲೆಯೂ ಇಲ್ಲಿ ಕಾರ್ಯನಿರ್ವಸುತ್ತದೆ. 2007, 2009, 2010ರಲ್ಲಿ ವೈಮಾನಿಕ ಪ್ರದರ್ಶನ ನಡೆದಿವೆ. ಪ್ರತಿವರ್ಷ ವಾಯುಪಡೆ ದಿನ ಇತರೆ ಸಂದರ್ಭಗಳಲ್ಲಿ ವೈಮಾನಿಕ ಪ್ರದರ್ಶನ ನಡೆಯುತ್ತವೆ. 2019ರಲ್ಲಿ ಕಾರ್ಗಿಲ್ ಯುದ್ಧದ 20ನೇ ವರ್ಷದ ವಿಜಯೋತ್ಸವ ವೇಳೆ ಒಂದು ವಾರ ಸೂರ್ಯಕಿರಣ ಹಾಗೂ ಕಾರ್ಗಿಲ್ ಯುದ್ಧ ಸಮಯದಲ್ಲಿದ್ದ ಮಿರಾಜ್ ಯುದ್ಧ ವಿಮಾನಗಳ ವೈಮಾನಿಕ ಪ್ರದರ್ಶನ ನಡೆಸಿ ಹುತಾತ್ಮ ಯೋಧರಿಗೆ ಇಲ್ಲಿ ಗೌರವ ಸಲ್ಲಿಸಲಾಗಿತ್ತು. ಇಲ್ಲಿ ಏರ್ ಶೋ ನಡೆಸಲು ಸಂಬಂಧಿತರಿಗೆ ಸೂಚಿಸುವಂತೆ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net