ಬೀದರ್ ಜಿಲ್ಲೆಗೆ ಹೆಸರು ತರುವೆ

Govt Employees Sanman-prabhakar kulkarni-1
Published on

ಬೀದರ್: ಪದೋನ್ನತಿಯು ನನ್ನ ಜವಾಬ್ದಾರಿ ಹೆಚ್ಚಿಸಿದೆ. ತವರು(ಬೀದರ್) ಜಿಲ್ಲೆಗೆ ಹೆಸರು ತರುವ ಕೆಲಸ ಮಾಡುವೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಅಪರ ಆಯುಕ್ತ ಪದ್ಮಾಕರ ಆರ್. ಕುಲಕರ್ಣಿ ಹೇಳಿದರು.

ವಾಣಿಜ್ಯ ತೆರಿಗೆ ಇಲಾಖೆ ಅಪರ ಆಯುಕ್ತರಾಗಿ ಬಡ್ತಿ ಹೊಂದಿದ ಪ್ರಯುಕ್ತ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕ ಮತ್ತು ವಿವಿಧ ಸಂಘ ಸಂಸ್ಥೆಗಳಿಂದ ನಗರದ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಭಾನುವಾರ ಸನ್ಮಾನ ಸ್ವೀಕರಿಸಿ ಮಾತನಾಡಿ, ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಏಳೆಂಟು ವರ್ಷಗಳಿಂದ ಯಾರಿಗೂ ಬಡ್ತಿ ಸಿಕ್ಕಿರಲಿಲ್ಲ. ಇದೀಗ ಗ್ರೂಪ್ ಡಿ ಹಿಡಿದು ಅಪರ ಆಯುಕ್ತ ಹುದ್ದೆವರೆಗೆ 1600 ಮಂದಿಗೆ ಪದೋನ್ನತಿ ದೊರೆತಿರುವುದು ಸಂತಸ ತಂದಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಮಾತನಾಡಿ, ಚಿಟಗುಪ್ಪ ತಾಲೂಕಿನ ಮುತ್ತಂಗಿ ಗ್ರಾಮದ ಪದ್ಮಾಕರ ಕುಲಕರ್ಣಿ ಅವರು ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಅತ್ಯುನ್ನತ ಹುದ್ದೆ ಅಲಂಕರಿಸಿದ ಜಿಲ್ಲೆಯ ಮೊದಲ ಅಧಿಕಾರಿ ಎಂಬುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ಕಲಬುರಗಿ ವಾಣಿಜ್ಯ ತೆರಿಗೆ (ಜಾರಿ ವಿಭಾಗ) ಉಪ ಆಯುಕ್ತ ಪಶುಪತಿ ನಾಯಕ್, ಸಹಾಯಕ ಆಯುಕ್ತ ಕಾಶೀನಾಥ ಪಲ್ಲೇರಿ, ವಾಣಿಜ್ಯ ತೆರಿಗೆ ಆಯುಕ್ತ ಶಾಂತಕುಮಾರ ರಾಠೋಡ್, ಸಹಾಯಕ ಆಯುಕ್ತ ಶಿವಲಿಂಗಪ್ಪ ಕನಕ, ವಾಣಿಜ್ಯ ತೆರಿಗೆ ಅಧಿಕಾರಿಗಳಾದ ಭೋಲಾಜಿ ಪಾಟೀಲ್, ಶಂಕರರಾವ ಡೊಂಗರೆ ಮಾತನಾಡಿದರು.

ಪ್ರಮುಖರಾದ ರಾಮರಾವ ಕುಲಕರ್ಣಿ, ಬಸವರಾಜ ಧನ್ನೂರ, ರಾಜಕುಮಾರ ಗುನ್ನಳ್ಳಿ, ಅಶೋಕ ರೇಜಂತಲ್, ಸೂರ್ಯಕಾಂತ ಮುಚಳಂಬೆ, ಉಮೇಶ ಮೂಲಿಮನಿ, ಸೂರ್ಯಕಾಂತ ಶೆಟಕಾರ, ಕುಶಾಲರಾವ ಪಾಟೀಲ್ ಖಾಜಾಪುರ, ಸುಧಾಕರರಾವ ಪಾಟೀಲ್ ಇತರರಿದ್ದರು. ಶಿವಕುಮಾರ ಬಾವಗೆ ನಿರೂಪಣೆ ಮಾಡಿದರು. ರಾಜಕುಮಾರ ಹೊಸದೊಡ್ಡೆ ಸ್ವಾಗತಿಸಿದರು. ರಾಜಶೇಖರ ಮಂಗಲಗಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net