

ಬೀದರ್: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 18ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ವಿಶೇಷ ವಿಮಾನ ಮೂಲಕ ಬೆಳಗ್ಗೆ 10.40ಕ್ಕೆ ಇಲ್ಲಿನ ವಾಯುನೆಲೆ ಕೇಂದ್ರಕ್ಕೆ ಆಗಮಿಸುವ ಸಿಎಂ, ಹೆಲಿಕಾಪ್ಟರ್ನಲ್ಲಿ ಔರಾದ್ ತಾಲೂಕಿನ ಬಲ್ಲೂರ(ಜೆ) ಗ್ರಾಮಕ್ಕೆ ತೆರಳಿ 11.05ಕ್ಕೆ ಸಿಪೆಟ್ ಕೇಂದ್ರದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸುವರು. ಅಲ್ಲಿಂದ ಔರಾದ್ ಗೆ ತೆರಳಿ ಅಮರೇಶ್ವರ ಕಾಲೇಜು ಮೈದಾನದಲ್ಲಿ ಮಧ್ಯಾಹ್ನ 12ಕ್ಕೆ ಆಯೋಜಿಸಿದ ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಳ್ಳುವರು. 3ಕ್ಕೆ ಹುಮನಾಬಾದ್ ಹೊರವಲಯದ ಮಾಣಿಕಪ್ರಭು ಶಾಲಾ ಮೈದಾನದಲ್ಲಿ ಹಮ್ಮಿಕೊಂಡಿದ್ದ ಜನಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ ಸಂಜೆ 5.20ಕ್ಕೆ ಕಲಬುರಗಿಗೆ ಪ್ರಯಾಣಿಸುವರು.