ಬೀದರ್ ಗೆ ಸಿದ್ದರಾಮಯ್ಯ ಪ್ರವಾಸ

siddu .
Published on

ಬೀದರ್: ಮಾಜಿ ಸಿಎಂ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭಾನುವಾರ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಬೆಳಗ್ಗೆ 11.30ಕ್ಕೆ ಬಸವಕಲ್ಯಾಣ ತಾಲೂಕಿನ ಕಲಖೋರಾ, ಚಿಕನಾಗಾಂವ, ಮುಡಬಿ ಗ್ರಾಮಗಳಿಗೆ ಭೇಟಿ ನೀಡಿ ಭಾರಿ ಮಳೆಯಿಂದ ಆಗಿರುವ ಬೆಳೆ, ಆಸ್ತಿ ಪಾಸ್ತಿ ಹಾನಿ ವೀಕ್ಷಿಸುವರು. ಮಧ್ಯಾಹ್ನ 12.30ಕ್ಕೆ ಬಸವಕಲ್ಯಾಣದಲ್ಲಿ ದಿ. ಬಿ.ನಾರಾಯಣರಾವ್ ಸಮಾಧಿ ಸ್ಥಳಕ್ಕೆ ಭೇಟಿ ನೀಡುವರು. 2ಕ್ಕೆ ನಗರದಲ್ಲಿ ಮಳೆ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ಕೊಡುವರು. ಸಂಜೆ 4ಕ್ಕೆ ಹುಮನಾಬಾದ್ ಕ್ಷೇತ್ರದ ತಾಳಮಡಗಿ, ಸಂಜೆ 5ಕ್ಕೆ ಬೀದರ್ ದಕ್ಷಿಣ ಕ್ಷೇತ್ರದ ಬಗದಲ್ ಗ್ರಾಮಕ್ಕೆ ಭೇಟಿ ನೀಡಿ ಅತಿವೃಷ್ಟಿ ವೀಕ್ಷಣೆ ಮಾಡುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net