ಬೀಡಿ, ಸಿಗರೇಟ್ ಜೀವಕ್ಕೆ ಕುತ್ತು

CTD 30 TAMBAKU--0006
Published on

ಚಿತ್ರದುರ್ಗ: ವಿಶ್ವಾದ್ಯಂತ ಪ್ರತಿವರ್ಷ ತಂಬಾಕು ಉತ್ಪನ್ನಗಳ ಸೇವನೆಯಿಂದ 10 ಲಕ್ಷ ಜನರು ಮರಣ ಹೊಂದುತ್ತಿದ್ದರೆ, ಪರೋಕ್ಷ ಸೇವನೆಯಿಂದಾಗಿ 2 ಲಕ್ಷಕ್ಕೂ ಅಧಿಕ ಜನರ ಜೀವಹಾನಿಯಾಗುತ್ತಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಕಾರ‌್ಯದರ್ಶಿ ಎಂ.ವಿಜಯ್ ಆತಂಕ ವ್ಯಕ್ತಪಡಿಸಿದರು.
ನಗರದ ಎಸ್‌ಜೆಎಂ ಪದವಿ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ವಿಶ್ವ ತಂಬಾಕುಮುಕ್ತ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ತಂಬಾಕು, ಬೀಡಿ-ಸಿಗರೇಟ್, ಇ-ಸಿಗರೇಟ್ ಇನ್ನಿತರ ತಂಬಾಕು ಪದಾರ್ಥಗಳು ವಾತಾವರಣವನ್ನು ಕಲುಷಿತಗೊಳಿಸುವುದಲ್ಲದೆ ಮಾನವನ ಆರೋಗ್ಯಕ್ಕೆ ಹಾನಿಕಾರಕವಾಗಿವೆ. ದುಶ್ಚಟಗಳ ವಿರುದ್ಧ ಜನರು ಜಾಗೃತರಾಗಿ ಆರೋಗ್ಯವನ್ನು ಕಾಪಾಡಿಕೊಳ್ಳುವುದರತ್ತ ಗಮನ ಹರಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ‌್ಯ ಡಾ.ಎಸ್.ಎಚ್.ಪಂಚಾಕ್ಷರಿ ಮಾತನಾಡಿ, ತಂಬಾಕು ಉತ್ಪನ್ನಗಳ ಬಳಕೆಯಿಂದ ಕ್ಯಾನ್ಸರ್ ಮತ್ತಿತರ ಅಪಾಯಕಾರಿ ಕಾಯಿಲೆಗಳು ತುತ್ತಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗಾಯತ್ರಿ ಶಿವರಾಂ, ಡಾ.ಆರ್.ಗೌರಮ್ಮ, ಡಾ.ಪ್ರಣೀತ, ಡಾ.ಸುನೀಲ್ ವಿ.ವಡವಡಗಿ, ಡಾ.ಗಝಲ ಯಾಸ್ಮಿನ್, ಡಾ.ಭೂಮಿಕಾ, ಡಾ.ಹರ್ಷವರ್ಧನ್, ಶಿವರಾಮ್, ಪ್ರೊ.ಎಲ್.ಶ್ರೀನಿವಾಸ್, ಪ್ರೊ.ಎಚ್.ಎಂ.ಮಂಜುನಾಥಸ್ವಾಮಿ, ಡಾ.ಬಿ.ರೇವಣ್ಣ ಮತ್ತಿತರರು ಇದ್ದರು.
ಪ್ರೊ.ಡಿ.ನಾಗರಾಜಪ್ಪ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ‌್ಯಕ್ರಮದ ಅಂಗವಾಗಿ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಏರ್ಪಡಿಸಲಾಗಿತ್ತು. ಡಾ.ಸತೀಶ್‌ನಾಯ್ಕ ಸ್ವಾಗತಿಸಿದರು. ಪ್ರೊ.ಟಿ.ಎನ್.ರಜಪೂತ್ ವಂದಿಸಿದರು. ಡಾ.ಎಸ್.ನಾಜೀರುನ್ನೀಸ ನಿರೂಪಿಸಿದರು.
ಎಸ್‌ಜೆಎಂ ದಂತ ಮಹಾವಿದ್ಯಾಲಯ, ರೆಡ್‌ಕ್ರಾಸ್, ಇಂಡಿಯನ್ ಡೆಂಟಲ್ ಅಸೋಸಿಯೇಷನ್ ಮತ್ತಿತರ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net