ಬೀಡಿ ಕಾರ್ಮಿಕರಿಗೆ ಸೌಲಭ್ಯ ಕಲ್ಪಿಸಲು ಆಗ್ರಹ - ಸಹಾಯಕ ಕಾರ್ಮಿಕ ಆಯುಕ್ತರಿಗೆ ಮನವಿ

IMG-20231129-WA0017.jpg
Published on

ದಾವಣಗೆರೆ: ಬೀಡಿ ಕಾರ್ಮಿಕರಿಗೆ ಕನಿಷ್ಠ ವೇತನ ಹಾಗೂ ಇತರೆ ಸೌಲಭ್ಯ ಕಲ್ಪಿಸುವ ಸಂಬಂಧ, ಬೀಡಿ ಕಂಪನಿಗಳ ವ್ಯವಸ್ಥಾಪಕರೊಂದಿಗೆ ಸಂಧಾನ ಸಭೆ ನಡೆಸಬೇಕೆಂದು ಆಗ್ರಹಿಸಿ ನೆರಳು ಬೀಡಿ ಕಾರ್ಮಿಕರ ಯೂನಿಯನ್‌ ವತಿಯಿಂದ ಬುಧವಾರ, ಸಹಾಯಕ ಕಾರ್ಮಿಕ ಆಯುಕ್ತರಿಗೆ ಮನವಿಪತ್ರ ಸಲ್ಲಿಸಲಾಯಿತು.

ಬೀಡಿ ಕಾರ್ಮಿಕರಿಗೆ ಕನಿಷ್ಠ ವೇತನ, ಗುರುತಿನ ಚೀಟಿ, ಪಿಎಫ್, ಬೋನಸ್, ಗ್ರಾಚ್ಯುಟಿ ನೀಡಬೇಕು. ಬೀಡಿ ತಯಾರಿಕೆಗೆ ಗುಣಮಟ್ಟದ ಎಲೆ-ತಂಬಾಕು ನೀಡಬೇಕು. ವಾರಪೂರ್ತಿ ಬೀಡಿ ಕೆಲಸವನ್ನು ನೀಡಬೇಕು. ಸರಾಸರಿ 2 ಸಾವಿರ ಬೀಡಿಗಳನ್ನು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

1 ಕೆಜಿ ಎಲೆ, 400 ಗ್ರಾಂ ತಂಬಾಕಿಗೆ ಕಾನೂನು ರೀತಿಯಲ್ಲಿ ಎಷ್ಟು ಬೀಡಿಗಳನ್ನು ಬೀಡಿ ಕಂಪನಿಗಳು ಸಂಗ್ರಹಿಸಬೇಕು. ವಾಸ್ತವದಲ್ಲಿ 2 ಸಾವಿರ ಬೀಡಿಗಳನ್ನು ಸಂಗ್ರಹಿಸುವ ಬದಲು ಬೀಡಿ ಕಂಪನಿ ಗುತ್ತಿಗೆದಾರರು ಈಗ 6 ತಿಂಗಳಿಂದ 2250 ಬೀಡಿಗಳನ್ನು ಕೇಳುತ್ತಿದ್ದಾರೆ. ಈ ಶೋಷಣೆ ನಿಲ್ಲಿಸಬೇಕೆಂದು ಒತ್ತಾಯಿಸಿದರು.

ನೆರಳು ಬೀಡಿ ಕಾರ್ಮಿಕರ ಯೂನಿಯನ್ ಅಧ್ಯಕ್ಷೆ ಜಬೀನಾಖಾನಂ, ಉಪಾಧ್ಯಕ್ಷೆ ಶಿರೀನ್ ಬಾನು, ಪ್ರಧಾನ ಕಾರ್ಯದರ್ಶಿ ಎಂ.ಕರಿಬಸಪ್ಪ, ನಜೀಮಾ, ಬಷೀರಾಬಿ, ನೂರ್ ಫಾತಿಮಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net