ಬೀಡನಾಳ ಗ್ರಾ.ಪಂ ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆ

BIDNAL
Published on

ಮುಂಡರಗಿ: ತಾಲೂಕಿನ ಬೀಡನಾಳ ಗ್ರಾ.ಪಂ. ಅಧ್ಯಕ್ಷರಾಗಿ ಕೊಪ್ಪಣ್ಣ ಯಲ್ಲಪ್ಪ ಕೊಪ್ಪಣ್ಣವರ ಹಾಗೂ ಉಪಾಧ್ಯಕ್ಷರಾಗಿ ಸವಿತಾ ಧರ್ಮಸಿಂಗ್ ಲಮಾಣಿ ಅವಿರೋಧವಾಗಿ ಆಯ್ಕೆಯಾದರು.

ಚುನಾವಣೆ ಅಧಿಕಾರಿಯಾಗಿ ಸಿಡಿಪಿಒ ಮಹಾದೇವ ಇಸರನಾಳ ಕಾರ್ಯನಿರ್ವಹಿಸಿದರು. ಪಿಡಿಒ ಮಂಜುಳಾ ಪಾಟೀಲ ಇದ್ದರು. ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಅಭಿನಂದಿಸಿದರು.

ಅಧ್ಯಕ್ಷ ಕೊಪ್ಪಣ್ಣ ಕೊಪ್ಪಣ್ಣವರ ಮಾತನಾಡಿ, ಎಲ್ಲ ಸದಸ್ಯರ ಹಾಗೂ ಗ್ರಾಮಸ್ಥರ ಸಹಕಾರದಿಂದ ಗ್ರಾ.ಪಂ. ವ್ಯಾಪ್ತಿಯ ಸರ್ವೋತೋಮುಖ ಅಭಿವೃದ್ಧಿಗೆ ಪ್ರಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದರು.

ಕರಬಸಪ್ಪ ಹಂಚಿನಾಳ, ರವೀಂದ್ರ ಉಪ್ಪಿನಬೆಟಗೇರಿ, ದೇವಪ್ಪ ಕಂಬಳಿ, ದಸ್ತಗಿರಿ ಹೊಸಮನಿ, ಬಸಪ್ಪ ಕರಕಣ್ಣವರ, ಹನುಮಂತ ಛಬ್ಬಿ, ರಾಜೇಂದ್ರ ಹುಜರತ್ತಿ, ಲೋಹಿತ್ ಪುರದ, ರೇಣವ್ವ ಪುಟ್ಟಣ್ಣವರ, ಗ್ರಾ.ಪಂ.ಸದಸ್ಯರಾದ ಪರಮೇಶ ಗೋಣೆಣ್ಣವರ, ದೇವೇಂದ್ರಗೌಡ ಪಾಟೀಲ, ಸುರೇಶ ಕುಕನೂರ, ಭಾರತಿ ಛಬ್ಬಿ, ಗುರುರಾಜ ಹರಿಜನ, ರೇಣುಕಾ ಸಣ್ಣಕಲ್ಲ, ಮಹಾದೇವಕ್ಕ ಕುದುರಿ, ಯಶೋಧಾ ಬಾಳಣ್ಣವರ, ಮಹಾದೇವಕ್ಕ ದೊಡ್ಡಮನಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net