ಪಾವಗಡ: ಪಟ್ಟಣದ ಶ್ರೀದೇವಿ ಲೇಔಟ್ನ ನಿವಾಸಿ ಚಾಂದ್ ಬಾಷಾ ಅವರ ಮನೆಯ ಬೀಗ ಒಡೆದು ನಗದು ಮತ್ತು ಚಿನ್ನಾಭರಣವನ್ನು ಕಳ್ಳರು
ದೋಚಿದ್ದಾರೆ. ಜು.1ರಂದು ಕೆಲಸದ ನಿಮಿತ್ತ ಆಂಧ್ರಪ್ರದೇಶದ ಕೊತ್ತಪಲ್ಲಿ ಗ್ರಾಮಕ್ಕೆ ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ಕಳ್ಳರು ಮನೆಯ ಹಿಂಭಾಗದ ಗೇಟ್ ಹಾಗೂ ಮನೆಯ ಡೋರ್ ಒಡೆದು 30 ಸಾವಿರ ನಗದು ಮತ್ತು 20 ಗ್ರಾಂ ಬಂಗಾರದ ಆಭರಣ ದೋಚಿದ್ದಾರೆ.ಚಾಂದ್ ಭಾಷಾ ಮನೆಗೆ ಮರಳಿದಾಗ ಟನೆ ಬೆಳಕಿಗೆ ಬಂದಿದ್ದು, ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.