ಬೀಗ ಮುರಿದ ೩.೧೫ ಲಕ್ಷ ರೂ. ಚಿನ್ನಾಭರಣ ಕಳ್ಳತನ

Crime Logo
Published on

ಕಲಬುರಗಿ: ಗೋದುತಾಯಿ ಬಡಾವಣೆ ಮನೆಯೊಂದರಲ್ಲಿ ೩.೧೫ ಲP್ಷÀ ರೂ. ಮೌಲ್ಯದ ವಸ್ತು ಕಳ್ಳತನ ನಡೆದಿದೆ. ಗೋದುತಾಯಿ ಬಡಾವಣೆ ನಿವಾಸಿ ಸಂಜಯ ಪಠವಾರಿ ಮನೆ ಕಳ್ಳತನವಾಗಿದೆ. ಹೆಂಡತಿ ಮತ್ತು ಮಕ್ಕಳ ಜತೆ ಜ.೨೭ರಂದು ಮನೆ ಬೀಗ ಹಾಕಿಕೊಂಡು ಸಂಬAಧಿಕರ ಮದುವೆ ಹಿನ್ನೆಲೆ ಬೆಂಗಳೂರಿಗೆ ತೆರಳಿದ್ದರು. ಫೆ.೨ರಂದು ಮನೆ ಮೊದಲನೇ ಮಹಡಿಯಲ್ಲಿನ ಬಾಡಿಗೆ ಇರುವವರು ದೂರವಾಣಿ ಮೂಲಕ ಮನೆ ಬೀಗ ಒಡೆದಿರುವ ಬಗ್ಗೆ ಮಾಹಿತಿ ನೀಡಿದ್ದರು. ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಬಂದು ಪರಿಶೀಲಿಸಿದ್ದರು. ಬೆಂಗಳೂರಿನಿAದ ರಾತ್ರಿ ೧೧.೩೦ಕ್ಕೆ ಬಂದು ನೋಡಿದಾಗ ಮನೆಯ ಅಲಮಾರದಲ್ಲಿದ್ದ ಐದು ಗ್ರಾಂ ಬಂಗಾರದ ಚೈನ್ ಎರಡು, ೧೨ ಗ್ರಾಂ ಬಂಗಾರದ ಸುತ್ತುಂಗರ, ೧೦ ಗ್ರಾಂ ಬಂಗಾರದ ಸುತ್ತುಂಗುರ, ೧೦ ಗ್ರಾಂ ಬಂಗಾರದ ಚೈನ್, ಹಾಗೂ ೭೫ ರೂ. ಮೌಲ್ಯದ ಬೆಳ್ಳಿ ಸಾಮಾನು, ೭೩,೦೦೦ ರೂ. ನಗದು ಸೇರಿ ೩.೧೫ ಲP್ಷÀ ರೂ. ಚಿನ್ನಾಭರಣ ಕಳ್ಳತನವಾಗಿವೆ ಎಂದು ದೂರಿನಲ್ಲಿ ತಿಳಿಸಿz್ದÁರೆ. ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net