ಬೀಕನಹಳ್ಳಿ ಸಹಕಾರಿ ಸಂಘಕ್ಕೆ ೯.೬೦ ಲಕ್ಷ ರೂ. ನಿವ್ವಳ ಲಾಭ

28 ckm 5
ಚಿಕ್ಕಮಗಳೂರು ಹೊರವಲಯದ ಬೀಕನಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾ ಟನಾ ಸಮಾರಂಭ ಹಾಗೂ ವಾರ್ಷಿಕ ಮಹಾಸಭೆಯನ್ನು ಬೀಕನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಜಿ.ಸೋಮಶೇಖರಪ್ಪ ಉದ್ಘಾಟಿಸಿದರು. ಎಚ್.ಪಿ.ಪುಟ್ಟೇಗೌಡ, ಬಿ.ಎಸ್.ರಾಜೇಶ್, ಸುಶೀಲಮ್ಮ, ಶಾಂತಮ್ಮ, ರೇಣುಕಾ ಪ್ರಸಾದ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ನಿಗಧಿತ ಸಮಯಕ್ಕೆ ಸಾಲಮರುಪಾವತಿಸಿ ಉತ್ತಮ ವಹಿವಾಟು ಹಾಗೂ ಅಭಿವೃದ್ಧಿಯತ್ತö್ತ ಹೆಜ್ಜೆ ಹಾಕುತ್ತಿರುವ ಬೀಕನಹಳ್ಳಿ ಸಹಕಾರ ಸಂಘವು ರಾಜ್ಯಮಟ್ಟದಲ್ಲಿ ಮೊದಲ ಸ್ಥಾನಕ್ಕೆ ಮಾನ್ಯವಾಗಿದೆ ಎಂದು ಬೀಕನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಜಿ.ಸೋಮಶೇಖರಪ್ಪ ತಿಳಿಸಿದರು.

ನಗರದ ಹೊರವಲಯದ ಬೀಕನಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾ ಟನಾ ಸಮಾರಂಭ ಹಾಗೂ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಸೋಮವಾರ ಮಾತನಾಡಿದರು.

ನಿರಂತರವಾಗಿ ಪ್ರತಿವರ್ಷವು ಲಾಭಾಂಶದಲ್ಲಿ ನಡೆಯುತ್ತಿರುವ ಬೀಕನಹಳ್ಳಿ ಸಹಕಾರ ಸಂಘದ ಸದಸ್ಯರಿಗೆ ನಿಗಧಿತ ಸಾಲಸೌಲಭ್ಯ ಒದಗಿಸಿ ಆರ್ಥಿಕವಾಗಿ ಸದೃಢಗೊಳಿಸುತ್ತಿದೆ. ಜೊತೆಗೆ ಸಾಲ ಪಡೆದು ಕೊಂಡವರು ಸಮಯಕ್ಕೆ ಸರಿಯಾಗಿ ಮರುಪಾವತಿಸುತ್ತಿರುವ ಕಾರಣ ಎನ್‌ಸಿಡಿಸಿಯಿಂದ ಹಾಗೂ ಅಪೆಕ್ಸ್ ಬ್ಯಾಂಕ್‌ನಿAದ ಅತ್ಯುತ್ತಮ ಪ್ರಶಸ್ತಿ ಪಡೆದುಕೊಂಡಿದೆ ಎಂದರು.

ಆರAಭದಲ್ಲಿ ಕೇವಲ ೩೦೦ಕ್ಕೂ ಹೆಚ್ಚು ಸದಸ್ಯರಿಂದ ಪ್ರಾರಂಭಿಸಿದ ಸಂಘವು ಪ್ರಸ್ತುತ ೧೩೦೦ಕ್ಕೂ ಹೆಚ್ಚು ಸದಸ್ಯರ ಸಂಖ್ಯಾಬಲವನ್ನು ಹೊಂದಿ ಹನ್ನೊಂದು ವರ್ಷ ಪೂರೈಸುತ್ತಿದೆ. ಸಹಕಾರಿ ಬಂಧುಗಳ ಸಹಕಾರ, ಪರಿಣಿತ ಸಿಬ್ಬಂದಿ ವರ್ಗ ಹಾಗೂ ಉತ್ತಮ ನಿರ್ದೇಶಕಕರ ಶಕ್ತಿಯಿಂದ ೧.೨೫ ಕೋಟಿ ವ್ಯಯಿಸಿ ಕಟ್ಟಡ ನಿರ್ಮಾಣದೊಂದಿಗೆ ಪ್ರಸಕ್ತ ಸಾಲಿನಲ್ಲಿ ೯.೬೦ ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಮಾಹಿತಿ ನೀಡಿದರು.

ಸಂಘದಲ್ಲಿ ೧.೫೬ ಷೇರು ಬಂಡವಾಳ, ೧೭.೦೨ ಕೋಟಿ ಠೇವಣಿ, ೨೨.೧೭ ಕೋಟಿ ಸಾಲ ವಿತರಣೆ, ೩.೪೮ ಕೋಟಿ ಹೂಡಿಕೆಗಳಿಗೆ ವಿನಿಯೋಗಿಸುವ ಮೂಲಕ ೨೦೨೪-೨೫ನೇ ಸಾಲಿನಲ್ಲಿ ೨೫ ಕೋಟಿ ಹೆಚ್ಚು ದುಡಿಯುವ ಬಂಡವಾಳವಾಗಿ ಹೆಚ್ಚಳಗೊಂಡಿದೆ. ಅಲ್ಲದೇ ಸಿಡಿಸಿಸಿ ಬ್ಯಾಂಕ್ ಮುಖೇನ ೩.೭೮ ಕೋಟಿ ರೂ. ಬೆಳೆ ಸಾಲಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.

ಪ್ರಸ್ತುತ ಸಂಘವು ಗಣಕೀಕೃತಗೊಂಡು ಉತ್ತಮ ಮತ್ತು ತ್ವರಿತ ಸೇವೆಯನ್ನು ಸದಸ್ಯರಿಗೆ ನೀಡುತ್ತಿದೆ. ಅಂತರ್ಜಾಲದಲ್ಲಿ ಸಂಘದ ಮಾಹಿತಿಗಳನ್ನು ಹಂಚಿಕೊಳ್ಳುವ ಮೂಲಕ ಪಾರದರ್ಶಕತೆಯನ್ನು ಕಾಪಾಡಿಕೊಂಡಿದ್ದು ಇದರಿಂದ ಸದಸ್ಯರ ನಂಬಿಕೆಯನ್ನು ಉನ್ನತ ಮಟ್ಟದಲ್ಲಿ ಕಾಯ್ದುಕೊಳ್ಳಲು ಸಹಕಾರಿಯಾಗಿದೆ ಎಂದು ಹೇಳಿದರು.

ಸಂಘದ ಉಪಾಧ್ಯಕ್ಷ ಎಚ್.ಎಸ್.ಪುಟ್ಟೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಸಹಕಾರ ಸಂಘವು ಪ್ರಾರಂಭದಲ್ಲಿ ಹಲವಾರು ಏರುಪೇರಿನಿಂದ ಬೆಳೆದು ಇದೀಗ ಕೋಟ್ಯಾಂತರ ರೂ. ವ್ಯವಹಾರ ನಡೆಸುವ ಮೂಲಕ ಅತ್ಯುತ್ತಮ ಸಂಘವಾಗಿ ಮಾರ್ಪಾಡಾಗಿದೆ. ಪ್ರವಾಸಿಗರ ಅನುಕೂಲತೆಗೆ ನೂತನ ಕೊಠಡಿಗಳನ್ನು ನಿರ್ಮಿಸಿ ಸಂಘದ ಬೆಳವಣಿಗೆಗೆ ಶ್ರಮಿಸಲಾಗುತ್ತಿದೆ ಎಂದು ತಿಳಿಸಿದರು.

ಸಂಘದ ಮುಖ್ಯನಿರ್ವಾಹಕ ಅಧಿಕಾರಿ ಬಿ.ಎಸ್.ರಾಜೇಶ್ ವಾರ್ಷಿಕ ವರದಿಯನ್ನು ಮಂಡಿಸಿದರು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಕೆ.ಸಿ.ವಿರೂಪಾಕ್ಷ, ಬಿ.ಎನ್.ಜಗದೀಶ್, ರೇಣುಕಾ ಪ್ರಸಾದ್, ರಾಜೇಶ್, ಬಿ.ಎಚ್.ವಿಜಯ್‌ಕುಮಾರ್, ಹೇಮಲತ, ಶಾಂತಮ್ಮ, ಸುಶೀಲಮ್ಮ, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಪವನ್‌ಕುಮಾರ್, ಗ್ರಾಪಂ ಸದಸ್ಯ ವಿಜಯ್‌ಕುಮಾರ್, ಸಂಘದ ಲೆಕ್ಕಿಗ ಸುನೀಲ್, ಪಿಗ್ನಿ ಸಂಗ್ರಹಕ ಸಚ್ಚಿನ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net