ಬಿಸಿಲೂರಿನಲ್ಲಿ ಮತ್ತೆ ಕರೊನಾ ಸ್ಪೋಟ; 46 ಪಾಸಿಟಿವ್ ಪ್ರಕರಣ ಪತ್ತೆ

Corona logo 3
Published on

ವಿಜಯಪುರ: ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷಿಯಲ್ಲಿ ಎಂಬಂತೆ ಮಹಾಮಾರಿ ಕರೊನಾ ಮತ್ತೆ ಒಕ್ಕರಿಸಿಕೊಂಡಿದ್ದು ಕಳೆದ 24 ಗಂಟೆಯಲ್ಲಿ ಜಿಲ್ಲೆಯಲ್ಲಿ 46 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

ಕಳೆದೊಂದು ತಿಂಗಳಿನಿಂದ ಕರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿ ಸಾಗಿದ್ದು ಪ್ರಸಕ್ತ ಸಾಲಿನಲ್ಲಿ ಗುರುವಾರ ಅತೀ ಹೆಚ್ಚು ಅಂದರೆ 46 ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಆ ಮೂಲಕ ಕರೊನಾ ಏರಿಕೆಯಾಗುತ್ತಿದ್ದು ಆತಂಕಕ್ಕೆ ಕಾರಣವಾಗಿದೆ.

ವಿಜಯಪುರ-15, ಬ.ಬಾಗೇವಾಡಿ-4, ಇಂಡಿ-5, ಚಡಚಣ-1, ಮುದ್ದೇಬಿಹಾಳ-6, ತಾಳಿಕೋಟಿ-3, ಸಿಂದಗಿ-11 ಹಾಗೂ ಅನ್ಯ ಜಿಲ್ಲೆಯ 1 ವ್ಯಕ್ಯಿಯಲ್ಲಿ ಕರೊನಾ ಪಾಸಿಟಿವ್ ಪತ್ತೆಯಾಗಿದೆ. ಒಟ್ಟು 14719 ಸಕ್ರಿಯ ಪ್ರಕರಣಗಳಿದ್ದು ಇನ್ನೂ 3070 ಜನರ ವರದಿ ಬರಬೇಕಿವೆ. ಕರೊನಾ ಪರೀಕ್ಷೆ ಪ್ರಮಾಣ ಹೆಚ್ಚಿಸಲಾಗಿದೆ. ಗಡಿಭಾಗದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ ಎಂದು ಜಿಲ್ಲಾಡಳಿತ ಪ್ರತಿಕ್ರಿಯಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net