

ವಾದಿರಾಜ ವ್ಯಾಸಮುದ್ರ ಕಲಬುರಗಿ
ಬಿಸಿಲೂರಿನಲ್ಲಿ ಡೆಡ್ಲಿ ಕರೊನಾ ಅಟ್ಟಹಾಸ ಮುಂದುವರಿದಿದೆ. ದಿನಕ್ಕೊಂದು ರೋಗಿ, ಪರೀಕ್ಷೆಗಳು ಜನರನ್ನು ಗಾಬರಿಗೊಳಿಸಿವೆ. ಆದರೆ ಈ ಟೆಸ್ಟ್ಗಳು ಅನಿವಾರ್ಯವೂ ಹೌದು.
ಕರೊನಾದಿಂದ ಮೃತಪಟ್ಟ ವೃದ್ಧನಿಗೆ ಚಿಕಿತ್ಸೆ ನೀಡಿದ 63 ವರ್ಷದ ಕುಟುಂಬ ವೈದ್ಯನಿಗೂ ಈಗ ಸೋಂಕು ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ ಮೂರಕ್ಕೇರಿದೆ. ಈ ವೈದ್ಯನ ಕುಟುಂಬದವರನ್ನು ಮನೆಯಲ್ಲೇ 14 ದಿನ ಇರಿಸಲು ನಿರ್ಧರಿಸಲಾಗಿದೆ. ಇವರಿಂದ ಚಿಕಿತ್ಸೆ ಪಡೆದವರ ಪತ್ತೆ ಕಾರ್ಯದಲ್ಲಿ ಆರೋಗ್ಯ ಇಲಾಖೆ ತೊಡಗಿದೆ. ಇದೆಲ್ಲದರ ಮಧ್ಯೆ ತೀವ್ರ ನಿಗಾ ಘಟಕದಲ್ಲಿರುವ ಇನ್ನೂ ನಾಲ್ವರ ವರದಿ ಬರಬೇಕಿದ್ದು, ನೆಗೆಟಿವ್ ಬರಲಿ ಎಂದು ಜಿಲ್ಲಾಡಳಿತ ಮತ್ತು ಜನಸಮೂಹ ಪ್ರಾಥರ್ಿಸುತ್ತಿದೆ.
ಲಭ್ಯ ಮಾಹಿತಿ ಪ್ರಕಾರ, ಈಗಾಗಲೇ 371 ಜನರ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಈ ಸಂಖ್ಯೆ 400 ಎಂದೂ ಹೇಳಲಾಗುತ್ತಿದೆ. ಕರೊನಾ ಬಗ್ಗೆ ಜಿಲ್ಲಾಡಳಿತ ಸ್ಪಷ್ಟ ಮಾಹಿತಿ ನೀಡುವ ಮೂಲಕ ಜನರಿಗೆ ಎಲ್ಲವನ್ನೂ ಗೊತ್ತು ಮಾಡುತ್ತಿದೆ.
ಕರೊನಾ ಪ್ರಕರಣ ಕಡಿಮೆಯಾಗಲಿ ಎಂಬುದು ಎಲ್ಲರ ಬಯಕೆ. ಆದರೆ ಈ ಸಂಖ್ಯೆ ಕ್ರಮೇಣ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಒಂದೆಡೆ ಶಂಕಿತ ಕರೊನಾ, ಮತ್ತೊಂದೆಡೆ ಹೊಸ ಸವಾಲುಗಳನ್ನು ಎದುರಿಸುವುದೇ ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತದ ಕೆಲಸವಾಗಿದೆ. ಹೀಗಾಗಿ ಇತರ ಕೆಲಸಗಳಿಗೆ ಕಡಿವಾಣ ಬಿದ್ದಿದೆ.
ಮೃತಪಟ್ಟ ವೃದ್ಧನಿಗೆ ಮಾಚರ್್ 6ರಿಂದ 9ರವರೆಗೆ ಸೋಂಕು ತಗುಲಿದ ವೈದ್ಯನಿಗೆ ಸೋಂಕು ತಗುಲಿದೆ. ಈ ವೈದ್ಯ ಮನೆ ಮನೆಗೆ ಹೋಗಿ ಚಿಕಿತ್ಸೆ ನೀಡುತ್ತಿದ್ದರು. ಹೀಗಾಗಿ ಎಲ್ಲೆಲ್ಲಿ ಚಿಕಿತ್ಸೆ ನೀಡಿದ್ದಾರೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ.
ಈ ಮಧ್ಯೆ ನಗರದಲ್ಲಿ ಅಘೋಷಿತ ಬಂದ್ ಸ್ಥಿತಿ ಮುಂದುವರಿದಿದೆ. ದೊಡ್ಡ ದೊಡ್ಡ ಹೋಟೆಲ್ಗಳು ಬಂದ್ ಆಗಿವೆ. ವಸತಿ ಗೃಹಗಳ ಮೇಲೆ (ಲಾಡ್ಜ್) ನಿಗಾ ಇಡಲಾಗಿದೆ. ಚಿಕ್ಕಪುಟ್ಟ ಸೇರಿ ಎಲ್ಲ ತೆರನಾದ ವ್ಯಾಪಾರ ಬಂದ್ ಮಾಡಲಾಗಿದೆ. ಇದನ್ನೇ ಜೀವನವನ್ನಾಗಿ ಮಾಡಿಕೊಂಡ ಕುಟುಂಬಗಳಿಗೆ ನಿತ್ಯದ ಜೀವನ ಕಷ್ಟಕರ ಎನಿಸಿದೆ. ತಮ್ಮ ಕಷ್ಟ ಏನೇ ಇದ್ದರೂ ವ್ಯಾಪಾರಿಗಳು ಜಿಲ್ಲಾಡಳಿತದ ಕ್ರಮವನ್ನು ಬೆಂಬಲಿಸುವುದಾಗಿ ಹೇಳುತ್ತಿದ್ದಾರೆ.
ಮಂಗಳವಾರ ಕಲಬುರಗಿಯಲ್ಲಿ ಎಲ್ಲ ಅಂಗಡಿ-ಮುಂಗಟ್ಟುಗಳು ಸಂಪೂರ್ಣ ಮುಚ್ಚಿದ್ದವು. ಪ್ರಯಾಣಿಕರ ಓಡಾಟವೂ ಕಮ್ಮಿ ಇತ್ತು. ಖಾಸಗಿ ಟ್ಯಾಕ್ಸಿ, ವಾಹನ, ಆಟೋಗಳ ಓಡಾಟದಲ್ಲಿ ಸಾಕಷ್ಟು ವ್ಯತ್ಯಯ ಕಂಡು ಬರುತ್ತಿದೆ. ತರಕಾರಿ ವ್ಯಾಪಾರವೂ ಹೆಚ್ಚೂ-ಕಡಿಮೆ ಸ್ಥಗಿತಗೊಂಡಿದೆ. ಬಹುತೇಕ ಬಂಡಿ ವ್ಯಾಪಾರಿಗಳು ತಮ್ಮ ವ್ಯಾಪಾರ ಬಂದ್ ಮಾಡಿದ್ದಾರೆ.
ಮಹಾನಗರ ಪಾಲಿಕೆ, ಆರೋಗ್ಯ ಇಲಾಖೆ ಸಿಬ್ಬಂದಿ ಎಲ್ಲ ಕಡೆ ಸುತ್ತಾಡಿ ವ್ಯಾಪಾರ ಬಂದ್ ಮಾಡುವಂತೆ ಮನವಿ ಮಾಡುತ್ತಿದ್ದಾರೆ. ಕೆಲವೆಡೆ ಬಲವಂತವಾಗಿಯೂ ಬಂದ್ ಮಾಡಿಸುತ್ತಿದ್ದು, ಇದು ಅನಿವಾರ್ಯವೂ ಆಗಿದೆ.
ದೇವರಿಗೂ ತಟ್ಟಿದ ಬಿಸಿ
ಕರೊನಾ ಸೋಂಕು ಕೂಡಲೇ ನಿಮರ್ೂಲನೆ ಆಗಲಿ ಎಂದು ಅಲ್ಲಲ್ಲಿ ಕೆಲವರು ದೇವರ ಮೊರೆ ಹೋಗಿದ್ದಾರೆ. ಶರಣಬಸವೇಶ್ವರ ದೇವಸ್ಥಾನಕ್ಕೆ ಕೆಲವರು ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿದ್ದಾರೆ. ಅನೇಕ ಪವಿತ್ರ ಕ್ಷೇತ್ರಗಳು ಭಕ್ತರಿಲ್ಲದೆ ಭಣಗುಡುತ್ತಿವೆ. ಸುಪ್ರಸಿದ್ಧ ದೇವಲ ಗಾಣಗಾಪುರ, ಘತ್ತರಗಾ, ಮಳಖೇಡ ಹೀಗೆ ನಾನಾ ಪವಿತ್ರ ಕ್ಷೇತ್ರಗಳಿಗೆ ಭಕ್ತರೇ ಬರುತ್ತಿಲ್ಲ. ಬಂದರೂ ಅವರನ್ನು ಸಲೀಸಾಗಿ ಬಿಡುತ್ತಿಲ್ಲ.
ಕರೊನಾ ವೈರಸ್ನಿಂದ ಮೃತಪಟ್ಟ ವೃದ್ಧನಿಗೆ ಚಿಕಿತ್ಸೆ ನೀಡಿದ ವೈದ್ಯರಿಗೂ ಸೋಂಕು ತಗಲಿರುವುದು ದೃಢಪಟ್ಟಿದೆ. ವೃದ್ಧನ ಜತೆ ಸಂಪರ್ಕದಲ್ಲಿದ್ದ ಇಬ್ಬರ ವರದಿ ಮತ್ತು ವಿದೇಶದಿಂದ ಬಂದ ಮತ್ತಿಬ್ಬರ ವರದಿ ಬೆಂಗಳೂರಿನಿಂದ ಬರಬೇಕಿದೆ. ಕರೊನಾ ಹರಡದಂತೆ ಜಿಲ್ಲಾಡಳಿತ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ.
| ಬಿ.ಶರತ್ ಜಿಲ್ಲಾಧಿಕಾರಿ
ಪೊಲೀಸರಿಗೂ ಬೇಕು ರಕ್ಷಾ ಕವಚ
ಒಂದೆಡೆ ಕರೊನಾ ಅಟ್ಟಹಾಸವಿದ್ದರೆ, ಇನ್ನೊಂದೆಡೆ ಶಂಕಿತರ ಪ್ರದೇಶ ಕಾಯುತ್ತಿರುವ ಪೊಲೀಸರು ಸಹ ತಮ್ಮ ಪ್ರಾಣ ಒತ್ತೆ ಇಟ್ಟು ಕೆಲಸ ಮಾಡುತ್ತಿದ್ದಾರೆ. ಈ ಪೊಲೀಸರಿಗೂ ಎಲ್ಲ ರೀತಿಯ ರಕ್ಷಾ ಕವಚ ಕೊಡುವುದು ಜಿಲ್ಲಾಡಳಿತ ಇಲ್ಲವೇ ಪೊಲೀಸ್ ಇಲಾಖೆ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳು ಗಮನಹರಿಸುವ ಅಗತ್ಯವಿದೆ. ಹಾಗಂತ ಇಲಾಖೆ ಹಿರಿಯ ಅಧಿಕಾರಿಗಳು ಏನನ್ನೂ ಮಾಡಿಲ್ಲವೆಂದಲ್ಲ. ಕೆಲ ಪೊಲೀಸರು ಮಾಸ್ಕ್ ಹಾಕಿಕೊಂಡು ಕೆಲಸ ಮಾಡುವುದನ್ನು ಕಾಣಬಹುದಾಗಿದೆ. ಆದರೆ ಶಂಕಿತ ಪ್ರದೇಶಗಳಲ್ಲಿರುವ ಪೊಲೀಸರು ಮತ್ತು ಅಧಿಕಾರಿಗಳ ಬಗ್ಗೆಯೂ ಗಮನಹರಿಸುವುದು ಅಷ್ಟೇ ಅವಶ್ಯಕವಾಗಿದೆ.
ಜಿಲ್ಲಾಡಳಿತ ಆದೇಶ ಧಿಕ್ಕರಿಸಿದರೆ ಕಠಿಣ ಕ್ರಮ
ಕಲಬುರಗಿ: ಕರೊನಾ ತಡೆಗೆ ಜಿಲ್ಲಾಡಳಿತದ ಕ್ರಮಗಳಿಗೆ ಎಲ್ಲರೂ ಸಹಕರಿಸಬೇಕು. ಅಂಗಡಿ, ಮುಂಗಟ್ಟು, ವ್ಯಾಪಾರ ವಹಿವಾಟು ಬಂದ್ ಮಾಡಬೇಕು. ಒಂದು ವೇಳೆ ಆದೇಶ ಧಿಕ್ಕರಿಸಿದ್ದು ಕಂಡುಬಂದರೆ ಕಠಿಣ ಕ್ರಮ ಕೈಕೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಜಿಲ್ಲಾಡಳಿತ ನೀಡಿದೆ. ಅವಶ್ಯಕ ವಸ್ತುಗಳಾದ ಔಷಧ, ಹಾಲು, ಹಣ್ಣು ತರಕಾರಿ ಮಾರಾಟ ಮಾತ್ರ ಇರಬೇಕು. ಜನತೆ ಆದಷ್ಟು ಮನೆಯಿಂದ ಹೊರಗೆ ಬರದಿರುವುದೇ ಸೂಕ್ತ ಎಂದು ಜಿಲ್ಲಾಧಿಕಾರಿ ಬಿ.ಶರತ್ ಮತ್ತೊಮ್ಮೆ ಮನವಿ ಮಾಡಿದ್ದಾರೆ. ಜನತೆ ಸೀಮಿತ ಅವಧಿಯಲ್ಲಿ ಬಂದು ಅಗತ್ಯ ವಸ್ತುಗಳನ್ನು ಖರೀದಿಸಿ ಮನೆಗಳಿಗೆ ಮರಳಬೇಕು. ಕಲಬುರಗಿಯಲ್ಲಿ ಈಗ ಎರಡು ಕರೊನಾ ಸೋಂಕು ಪ್ರಕರಣಗಳಿದ್ದು, ಇಎಸ್ಐ ಐಸೋಲೇಟೆಡ್ ವಾಡರ್್ನಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಆರೋಗ್ಯ ಇಲಾಖೆಯಿಂದ ಮಹಿಳೆ ಹಿಸ್ಟರಿ
ಮೃತ ವೃದ್ಧನ ಮಗಳಿಗೂ ಕರೊನಾ ಸೋಂಕು ದೃಢಪಟ್ಟಿದ್ದರಿಂದ ಆಕೆ ಟ್ರಾವೆಲ್ ಹಿಸ್ಟರಿಯನ್ನು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದೆ. ಫೆ.29ಕ್ಕೆ ಕೆಎನ್ಝಡ್ ಫಂಕ್ಷನ್ ಹಾಲ್ ಬಳಿ ನಿವಾಸದಲ್ಲಿ ಭೇಟಿ, ಮಾಚರ್್ 1, 2 ಕಲಬುರಗಿ ಕೋಟೆ ಹತ್ತಿರದ ಮನೆಯಲ್ಲಿ ವಾಸ್ತವ್ಯ. 3ಕ್ಕೆ ತಂದೆ ಮನೆಯಲ್ಲಿ ವಾಸ್ತವ್ಯ. 4, 5ರಂದು ಕೋಟೆ ಹತ್ತಿರದ ಅವಳ ಮನೆಯಲ್ಲಿ ವಾಸ. 6ರಂದು ಮತ್ತೆ ತಂದೆ ಭೇಟಿ. 7, 8ರಂದು ಕೋಟೆ ಹತ್ತಿರದ ಮನೆಯಲ್ಲಿ ವಾಸ್ತವ್ಯ. 9ರಂದು ತಂದೆ ಜತೆ ಆಂಬುಲೆನ್ಸ್ನಲ್ಲಿ ಪ್ರಯಾಣ. 10ಕ್ಕೆ ತಂದೆಯ ಕಲಬುರಗಿ ಬಹುಮನಿ ಕೋಟೆ ಹತ್ತಿರದ ಮನೆಯಲ್ಲಿ ವಾಸ್ತವ್ಯ. 11ರಂದು ಇಎಸ್ಐ ಆಸ್ಪತ್ರೆಯಲ್ಲಿ ದಾಖಲು.
ದೇವರಿಗೆ ಮೊರೆ
ಕರೊನಾ ದೂರವಾಗಲಿ, ಜನರಲ್ಲಿರುವ ಭಯ ಹೋಗಲಿ ಎಂದು ಪ್ರಾಥರ್ಿಸಿ ಮರಗುತ್ತಿ ಗ್ರಾಮದಲ್ಲಿ ಶ್ರೀ ರೇಣುಕಾ ಶರಣರು ದೇವರ ಮೊರೆ ಹೋಗಿದ್ದು, ಮೂರು ದಿನ ಸತತ 9 ಗಂಟೆ ನಿರಂತರ ಹೋಮ-ಹವನ ನಡೆಸುತ್ತಿದ್ದಾರೆ.