ಬಿಸಿಎಂ ಇಲಾಖೆ ಸಿಬ್ಬಂದಿಯನ್ನು ಸೇನಾನಿಗಳೆಂದು ಘೋಷಿಸಿ

20 bgp bcm news photo
Published on

ಬಾಗೇಪಲ್ಲಿ : ಕರೊನಾ ಕೇರ್ ಸೆಂಟರ್‌ಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹಿಂದುಳಿದ ವರ್ಗಗಳ ಕಲ್ಯಾಣ (ಬಿಸಿಎಂ)ಇಲಾಖೆ ಸಿಬ್ಬಂದಿಯನ್ನು ಕರೊನಾ ಸೇನಾನಿಗಳೆಂದು ಘೋಷಿಸಿ ಸೇವಾ ಭದ್ರತೆ ಕಲ್ಪಿಸಬೇಕೆಂದು ಒತ್ತಾಯಿಸಿ ಇಲಾಖೆ ಸಿಬ್ಬಂದಿ ಸೋಮವಾರ ತಹಸೀಲ್ದಾರ್ ಎಂ.ನಾಗರಾಜು ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಸೋಂಕು ನಿಂಯತ್ರಣಕ್ಕಾಗಿ ಹಗಲು ರಾತ್ರಿ ಕಾರ್ಯನಿರ್ವಹಿಸುತ್ತಿರುವ ವೈದ್ಯಕೀಯ, ಪೊಲೀಸ್ ಹಾಗೂ ಅಶಾ ಕಾರ್ಯಕರ್ತರನ್ನು ಸರ್ಕಾರ ಸೇನಾನಿಗಳೆಂದು ಘೋಷಣೆ ಮಾಡಿದೆ. ಕರ್ತವ್ಯ ವೇಳೆ ಮೃತಪಟ್ಟರೆ ಸರ್ಕಾರದಿಂದ 50 ಲಕ್ಷ ರೂ. ಪರಿಹಾರ ಹಾಗೂ ಕುಟುಂಬಕ್ಕೆ ಸೇವಾ ಭದ್ರತೆ ನೀಡುವುದಾಗಿ ತಿಳಿಸಿದೆ. ಆದರೇ ಹಿಂದುಳಿದ ವರ್ಗಗಳ ವಸತಿ ನಿಲಯಗಳಲ್ಲಿ ಸ್ಥಾಪಿಸಿರುವ ಕ್ವಾರಂಟೈನ್ ಕೇಂದ್ರ ಮತ್ತು ಕೇರ್ ಸೆಂಟರ್‌ಗಳಲ್ಲಿನ ಸಿಬ್ಬಂದಿಯನ್ನು ಕಡೆಗಣಿಸಿದೆ ಎಂದು ಬಿಸಿಎಂ ಇಲಾಖೆ ವಿಸ್ತರಣಾಧಿಕಾರಿ ಡಿ.ವೈ.ಮಂಜುನಾಥ್ ಅಸಮಾಧಾನ ವ್ಯಕ್ತಪಡಿಸಿದರು.

ಕರೊನಾ ಸೋಂಕಿತರಿಗೆ ಸೇವೆ ಸಲ್ಲಿಸುತ್ತಿರುವ ವಸತಿ ನಿಲಯ ಮೇಲ್ವಿಚಾರಕರು, ಅಡುಗೆ ಸಿಬ್ಬಂದಿ, ರಾತ್ರಿ ಕಾವಲುಗಾರರು ಹಾಗೂ ಉಸ್ತುವಾರಿ ವಹಿಸಿರುವ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಸೇವೆಯನ್ನು ಗುರುತಿಸಿ ಇಲಾಖೆ ಸಿಬ್ಬಂದಿಯನ್ನು ಸೇನಾನಿಗಳೆಂದು ಘೋಷಿಸಬೇಕು, ಮೃತಪಟ್ಟರೆ 50 ಲಕ್ಷ ಪರಿಹಾರ ಮತ್ತು ಕುಟುಂಬಕ್ಕೆ ಸೇವಾ ಭಧ್ರತೆ ಕಲ್ಪಿಸಬೇಕೆಂದು ಆಗ್ರಹಿಸಿದರು.ನಿಲಯ ಮೇಲ್ವಿಚಾರಕರು, ಅಡುಗೆ ಸಹಾಯಕರು, ಸಿಬ್ಬಂದಿ , ಡಿ ಗ್ರೂಪ್ ನೌಕರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net