

ಕಲಬುರಗಿ: ಮನೆಯಲ್ಲಿ ಸ್ನಾನಕ್ಕಾಗಿ ಬಕೆಟ್‌ನಲ್ಲಿ ಇಟ್ಟಿದ್ದ ಬಿಸಿ ನೀರಿನಲ್ಲಿ ಬಿದ್ದು, ಬಾಲಕಿ ಮೃತಪಟ್ಟ ಘಟನೆ ನಗರದ ಮುಸ್ಲಿಂ ಸಂಘ ಬಳಿಯ ತಾಜ್ ನಗರದಲ್ಲಿ ನಡೆದಿದೆ. ಆಫ್ರೀನ್‌ಬಾನು (೫) ಮೃತ ಬಾಲಕಿ. ತಾಯಿ ತಾಹೇರಬಾನು ಹೊನ್ನಳ್ಳಿ ನ.೧೨ರಂದು ಸಂಜೆ ಸ್ನಾನ ಮಾಡಲು ಬಕೆಟ್‌ನಲ್ಲಿ ಹೀಟರ್ ಹಚ್ಚಿ ನೀರು ಬಿಸಿ ಮಾಡಿದ್ದು, ಬಕೆಟ್ ಕೆಳಗೆ ಇಟ್ಟಿದ್ದಾರೆ. ಮೂವರು ಮಕ್ಕಳು ಅಲ್ಲಿಯೇ ಆಟವಾಡುತ್ತಿದ್ದು, ಒಳಗೆ ಹೋಗಿ ಬಟ್ಟೆ ತರುವ ವೇಳೆಗೆ ಆಫ್ರಿನಾ ಬಾನು ಬಿಸಿ ನೀರಿನ ಬಕೆಟ್‌ನಲ್ಲಿ ಬಿದ್ದಿದ್ದಾಳೆ. ಭಾಗಶಃ ದೇಹದಲ್ಲಿ ಸುಟ್ಟ ಗಾಯಗಳಾಗಿವೆ. ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಗುಣಮುಖವಾಗದೆ ನ.೧೮ರಂದು ಮೃತಪಟ್ಟಿದ್ದಾಳೆ. ಈ ಕುರಿತು ತಾಯಿ ತಾಹೇರಬಾನು ನೀಡಿದ್ದ ದೂರಿನಂತೆ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.