

ಬೆಳಗಾವಿ: ಕೂಲಿ ಕೆಲಸಕ್ಕೆ ತೆರಳಿದ್ದ ವೇಳೆ ಯುವಕನೋರ್ವ ಕೈ-ಕಾಲು ತೊಳೆಯಲು ಹೋಗಿ ಕಾಲು ಜಾರಿ ಕಾರ್ಖಾನೆಯ ಸ್ಪ್ರೇಪಾಂಡ್(ಬಿಸಿ) ನೀರಿನ ಟ್ಯಾಂಕ್‌ನಲ್ಲಿ ಬಿದ್ದು ಮೃತಪಟ್ಟ ಘಟನೆ ಹುಕ್ಕೇರಿ ತಾಲೂಕಿನ ಸಂಕೇಶ್ವರ ಹೊರವಲಯದ ಹಿರಾ ಶುಗರ್ ಸಕ್ಕರೆ ಕಾರ್ಖಾನೆಯಲ್ಲಿ ಬುಧವಾರ ಸಂಭವಿಸಿದೆ.
ಗೋಟುರು ಗ್ರಾಮದ ವಿನಾಯಕ ಸಂಜಯ ಗೊರವ್ವಗೋಳ(22) ಮೃತ ಯುವಕ. ಮಂಗಳವಾರ ಕಬ್ಬು ಗಾಡಿಗಳ ಮೇಲೆ ಕೂಲಿ ಕೆಲಸಕ್ಕಾಗಿ ಹೋಗುತ್ತೇನೆ ಎಂದು ಮನೆಯಲ್ಲಿ ಹೇಳಿ ವಿನಾಯಕ ಹೋಗಿದ್ದ.
ಕಬ್ಬಿನ ಗಾಡಿ ಜತೆ ಬಂದ ಯುವಕ ಕೈಕಾಲು ತೊಳೆದುಕೊಳ್ಳಲು ಹೋಗಿದ್ದಾಗ ಕಾಲು ಜಾರಿ ಬಿಸಿ ನೀರಿನ ಟ್ಯಾಂಕ್ ಬಿದ್ದು ಮೃತಪಟ್ಟಿದ್ದಾನೆ. ಈ ಕುರಿತು ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.