ಬಿಸಲವಾಡಿ ಗ್ರಾಮದಲ್ಲಿ ಸಹಕಾರ ಸಪ್ತಾಹ

21Rajesh4
Published on

ಚಾಮರಾಜನಗರ: ತಾಲೂಕಿನ ಬಿಸಲವಾಡಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಂಘದ ವತಿಯಿಂದ ಗ್ರಾಮದ ಲಕ್ಷ್ಮೀದೇವಿ ದೇವಸ್ಥಾನದ ಆವರಣದಲ್ಲಿ 71ನೇ ಅಖಿಲಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡಪಸಾದ್ ಮಾತನಾಡಿ, ಸಹಕಾರ ಸಂಘಗಳ ಅಭಿವೃದ್ಧಿಗೆ ಹೆಚ್ಚು ಒತ್ತುಕೊಟ್ಟ ಕೀರ್ತಿ ದೇಶದ ಮೊದಲ ಪ್ರಧಾನಿ ಜವಹರಲಾಲ್ ನೆಹರು ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

ಚಾಮುಲ್ ನಿರ್ದೇಶಕ ಎಚ್.ಎಸ್.ಬಸವರಾಜು, ಸದಾಶಿವಮೂರ್ತಿ ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಕರಾದ ಎಂ.ಎಂ.ನಾಗರಾಜು, ಮುದ್ದಯ್ಯ, ಎಚ್.ಎನ್.ಸುಂದರ್ ರಾಜ್, ಎಂ.ಎಂ.ಪ್ರಭುಸ್ವಾಮಿ, ಎಂ.ರವಿ, ಎಚ್.ಎಂ.ಬಸವಣ್ಣ, ವಿ.ಮಹದೇವಸ್ವಾಮಿ ಮತ್ತು ನಾಗಸುಂದರ, ಸಹಾಯಕ ಸಂಘಗಳ ಉಪ ನಿಬಂಧಕರಾದ ಸಿ.ಜ್ಯೋತಿ ಅರಸ್, ಪಿ.ಶೋಭಾ, ಚಾಮುಲ್ ಸಹಾಯಕ ವ್ಯವಸ್ಥಾಪಕ ಅಮರ್, ಚಾಮರಾಜನಗರ ತಾಲೂಕು ಸಹಕಾರ ಸಂಘಗಳ ಮಾರ್ಗ ವಿಸ್ತರಣಾಧಿಕಾರಿಗಳಾದ ದಯಾನಂದ್, ಭಾಗ್ಯರಾಜ್, ಲಕ್ಷ್ಮೀ, ನಂಜುಂಡಸ್ವಾಮಿ, ರಾಜು, ನಾಗೇಶ್, ಹೇಮಂತ್, ನಾಗೇಶ್, ಅಧ್ಯಕ್ಷ ಎನ್.ಬಸವಣ್ಣ, ಮುಖ್ಯ ನಿರ್ವಹಣಾಧಿಕಾರಿ ಮನುಜ, ಮುಖ್ಯ ಕಾರ್ಯ ನಿರ್ವಾಹಕ ಮಹೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net