ಬಿಸಲಕೊಪ್ಪ ಪಿಎಚ್​ಸಿಗೆ ಉತ್ತಮ ಆಸ್ಪತ್ರೆ ಬಿರುದು

8sirsi3
Published on

ಶಿರಸಿ: 2019-20ನೇ ಸಾಲಿನ ಆರೋಗ್ಯ ಇಲಾಖೆಯ ಕಾಯಕಲ್ಪ ಕಾರ್ಯಕ್ರಮದಡಿ ತಾಲೂಕಿನ ಬಿಸಲಕೊಪ್ಪದ ಪ್ರಾಥಮಿಕ ಆರೋಗ್ಯ ಕೇಂದ್ರವು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಉತ್ತಮ ಆಸ್ಪತ್ರೆ ಬಿರುದಿಗೆ ಪಾತ್ರವಾಗಿದೆ.

ಸ್ವಚ್ಛತೆ, ಸಾರ್ವಜನಿಕ ಸ್ಪಂದನೆ, ಉತ್ತಮ ಚಿಕಿತ್ಸೆ, ತ್ಯಾಜ್ಯ ವಿಲೇವಾರಿ ಹಾಗೂ ಸೋಂಕಿನ ನಿವಾರಣೆ ಒಳಗೊಂಡಂತೆ ಕಾಯಕಲ್ಪ ಕಾರ್ಯಕ್ರಮದ ನಿಯಮವಳಿಯನ್ನು ಪೂರೈಸಿದ ಕಾರಣಕ್ಕೆ ಆರೋಗ್ಯ ಇಲಾಖೆ ಪ್ರಥಮ ಸ್ಥಾನಕ್ಕೆ ಆಯ್ಕೆ ಮಾಡಿದೆ. ಈ ಹಿಂದೆ ಆಸ್ಪತ್ರೆಯ ವೈದ್ಯರಾಗಿದ್ದ ಡಾ.ನೂರುದ್ದೀನ್ ಬೆನ್ನೂರು, ಹಾಲಿ ವೈದ್ಯರಾದ ಡಾ.ವಿನಾಯಕ ಭಟ್ಟ, ಡಾ. ಗೀತಾ ಮಠ ಹಾಗೂ ಸಿಬ್ಬಂದಿ ಪರಿಶ್ರಮದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಕೇಂದ್ರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.</

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net