ಬಿಳಿಗೆರೆ ಪಾಳ್ಯದಲ್ಲಿ ಚಿರತೆ ಸೆರೆ

Published on

ಬಿಳಿಗೆರೆ: ತಿಪಟೂರುತಾಲೂಕು ಬಿಳಿಗೆರೆ ಪಾಳ್ಯ ಗ್ರಾಮದಲ್ಲಿ 10 ತಿಂಗಳ ಚಿರತೆ ಸೆರೆ ಹಿಡಿಯಲಾಯಿತು. ಬೆಳಗಿನ ಗ್ರಾಮಸ್ಥರ ಕಣ್ಣಿಗೆ ಬಿದ್ದ ಚಿರತೆಯನ್ನು ಅರಣ್ಯ ಅಧಿಕಾರಿಗಳಾದ ಕೆ.ಎಲ್​.ಮಧುಗೆ ದೂರವಾಣಿ ಮೂಲಕ ತಿಳಿಸಲಾಯಿತು. ಆರಕ್ಷಕ ಠಾಣೆಯ ಕುಮಾರ್​ ಸ್ಥಳಕ್ಕೆ ಧಾವಿಸಿ ಚಿರತೆ ಸೆರೆಹಿಡಿಯುವವರೆಗೂ ನಿಗಾವಹಿಸಿದ್ದರು. ಗ್ರಾಮಸ್ಥರಾದ ಸತೀಶ್​ ಕುಮಾರ್​, ಪರಮೇಶ್​, ಮಹೇಶ್​, ಸ್ವಾಮಿ,ಮಲ್ಲಿಕಣ್ಣ ಹನುಮಂತ ಸಹಕಾರ ಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net