ಬಿಳಿಗಿರಿರಂಗನಬೆಟ್ಟ ಹುಂಡಿಯಲ್ಲಿ 26.74 ಲಕ್ಷ ರೂ. ಸಂಗ್ರಹ

Oplus_131072
Oplus_131072
Published on

ಯಳಂದೂರು : ತಾಲೂಕಿನ ಪ್ರಸಿದ್ಧ ಗಿರಿಧಾಮವಾಗಿರುವ ಬಿಳಿಗಿರಿರಂಗನಬೆಟ್ಟದ ಶ್ರೀ ಬಿಳಿಗಿರಿರಂಗನಾಥಸ್ವಾಮಿ ದೇಗುದಲ್ಲಿ ಗುರುವಾರ ಹುಂಡಿ ಹಣ ಎಣಿಕೆಯಾಗಿದ್ದು ಈ ಬಾರಿ 26,74,880 ರೂ. ಸಂಗ್ರಹವಾಗಿದೆ.

ಕಳೆದ ಎರಡು ತಿಂಗಳಿಂದ ದೇಗುಲದ ಹುಂಡಿಗಳಲ್ಲಿ ಈ ಹಣ ಸಂಗ್ರಹವಾಗಿದೆ. ಇದರಲ್ಲಿ 25,31,145 ರೂ. ನಗದು, 1,43,735 ರೂ. ನಾಣ್ಯವೂ ಸೇರಿದೆ. ಇದರೊಂದಿಗೆ ನೇಪಾಳ ದೇಶದ 100 ರೂ. ಮೌಲ್ಯದ ಕರೆನ್ಸಿ ಹಾಗೂ 2 ಸಾವಿರ ರೂ. ಮುಖ ಬೆಲೆಯ ಅಮಾನ್ಯವಾಗಿರುವ 3 ನೋಟುಗಳು ದೊರಕಿವೆ ಎಂದು ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಮೋಹನ್‌ಕುಮಾರ್ ಮಾಹಿತಿ ನೀಡಿದರು.

ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜೆ.ಶ್ರೀನಿವಾಸ್, ಸದಸ್ಯರಾದ ರಾಜಣ್ಣ, ವೆಂಕಟರಾಮು, ನಾರಾಯಣಸ್ವಾಮಿ, ಸಿದ್ದರಾಜು ತಹಸೀಲ್ದಾರ್ ಬಸವರಾಜು, ಅರ್ಚಕ ಶ್ರೀನಿವಾಸ, ನಾಗೇಂದ್ರಭಟ್, ಕಾವೇರಿ ಗ್ರಾಮೀಣ ಬ್ಯಾಂಕ್‌ನ ವ್ಯವಸ್ಥಾಪಕ ವೀರಭದ್ರಸ್ವಾಮಿ, ಪಾರುಪತ್ತೇಗಾರ್ ರಾಜು, ಶೇಷಾದ್ರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net