

ಕೊಡೇಕಲ್: ಮಳೆ ಕೊರತೆಯ ನಡುವೆಯೂ ಉತ್ತಮವಾಗಿ ಬೆಳೆಯುತ್ತಿರುವ ಬಿಳಿ ಬಂಗಾರ ಎಂದೇ ಕರೆಯಲ್ಪಡುವ ವಾಣಿಜ್ಯ ಬೆಳೆ ಹತ್ತಿಗೆ ತಾಮ್ರ ರೋಗ ಸೇರಿ ಇತರೆ ರೋಗ ಬಾಧೆಯಿಂದ ರೈತರು ಮತ್ತೆ ಸಂಕಷ್ಟ ಎದುರಿಸುವಂತಾಗಿದೆ.
ಮುAಗಾರು ಹಂಗಾಮಿನಲ್ಲಿ ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದಿದ್ದರೂ ಕೂಡ ಆಗಾಗ ಸುರಿದ ಮಳೆಯ ಆಧಾರದ ಮೇಲೆ ರೈತರು ಉತ್ತಮ ಲಾಭದ ನೀರೀಕ್ಷೆಯೊಂದಿಗೆ ದೀರ್ಘಾವಧಿ ವಾಣಿಜ್ಯ ಬೆಳೆ ಹತ್ತಿ ಬಿತ್ತನೆ ಮಾಡಿದ್ದಾರೆ.
ರೈತರ ಪಾಲಿಗೆ ಬಿಳಿ ಬಂಗಾರ ಎಂದು ಕರೆಯಲ್ಪಡುವ ಹತ್ತಿಗೆ ಕಳೆದ ಎರಡು ವರ್ಷದಿಂದ ಸಿಗುತ್ತಿರುವ ಉತ್ತಮ ಬೆಲೆಯಿಂದಾಗಿ ಈ ವರ್ಷವೂ ವಲಯದಲ್ಲಿ ೬೦೦ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆ ಮಾಡಲಾಗಿದೆ. ಆಗಸ್ಟ್ ಕೊನೇ ಮತ್ತು ಸೆಪ್ಟೆಂಬರ್ ಮೊದಲ ವಾರದಲ್ಲಿ ಸುರಿದ ಮಳೆಯಿಂದ ಬೆಳೆಗಳಿಗೆ ಜೀವ ಕಳೆ ಬಂದಿದ್ದು ನೋಡಿ ರೈತರು ಖುಷಿಯಾಗಿದ್ದರು.
ಆದರೆ ಕಾಯಿ ಕಟ್ಟುತ್ತಿರುವ ಹತ್ತಿ ಬೆಳೆಗೆ ತಾಮ್ರ, ಎಲೆ ಚುಕ್ಕಿ ಹಾಗೂ ಮಜ್ಜಿಗೆ ರೋಗ ಬಾಧೆ ಕಾಣಿಸಿಕೊಂಡಿದ್ದು, ಈ ರೋಗ ನಿಯಂತ್ರಣಕ್ಕಾಗಿ ದುಬಾರಿ ಬೆಲೆಯ ಕ್ರೀಮಿನಾಶಕ ಸಿಂಪರಣೆ ಮಾಡಿದರು ಕೂಡ ನಿಯಂತ್ರಣಕ್ಕೆ ಬಾರದೆ ಇರುವ ಕಾರಣ ರೈತರಿಗೆ ಸಹಜವಾಗಿಯೇ ಇಳುವರಿ ಕುಸಿತದ ಭೀತಿ ಕಾಡಲಾರಂಭಿಸಿದೆ. ಈ ರೋಗ ಬಾಧೆಯಿಂದ ಗಿಡದ ಎಲೆ ಮತ್ತು ಕಾಯಿಗಳು ಕೆಂಪು ಬಣ್ಣಕ್ಕೆ ತಿರುಗುವ ಮೂಲಕ ರೋಗಕ್ಕೆ ಸಿಲುಕಿ ಹತ್ತಿ ಅವದಿಗೂ ಮೊದಲೇ ಒಡೆಯುತ್ತಿರುವದು ಮತ್ತಷ್ಟು ಆತಂಕ ಸೃಷ್ಟಿಯಾಗಿದೆ.
ಈಗಾಗಲೇ ನಾಲ್ಕು ಬಾರಿ ದುಬಾರಿ ಕ್ರಿಮಿನಾಶಕ ಸಿಂಪರಣೆ ಮಾಡಿದರೂ ಸೋತು ಸುಣ್ಣವಾಗಿz್ದೆÃವೆ. ಯಾಕಾರೆ ಈ ಹತ್ತಿ ಬಿತ್ತನೆ ಮಾಡಿz್ದÉÃವೆ. ಹತ್ತಿಗೆ ಈವರೆಗೆ ಮಾಡಿದ ಖರ್ಚು ಬಂದರೆ ಸಾಕಾಗಿದೆ. ಹಾಗೊಂದು ವೇಳೆ ಇದು ಬಾರದಿದ್ದರೆ ರೈತರು ಗಂಭೀರ ಸ್ಥಿತಿ ಎದುರಿಸಬೇಕಾಗುತ್ತದೆ. ಒಟ್ಟಾರೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಬೆಳೆಗೆ ರೋಗ ಬಾಧೆ ಕಾಡುತ್ತಿರುವ ಕಾರಣ ಹತ್ತಿ ಬೆಳೆದ ರೈತರು ಮತ್ತಷ್ಟು ಸಂಕಷ್ಟ ಅನುಭವಿಸುವಂತಾಗಿದೆ.