

ಚಿತ್ರದುರ್ಗ: ಬಿಳಿ ಧೋತಿ, ಶರ್ಟ್ ಅಥವಾ ಜುಬ್ಬಾ ಉಡುಪು ಅಪ್ಪಟ ಭಾರತೀಯ ಸಂಸ್ಕೃತಿಯ ಪ್ರತಿಬಿಂಬವಾಗಿದೆ ಎಂದು ದಾವಣಗೆರೆ ವಿರಕ್ತ ಮಠದ ಡಾ. ಬಸವಪ್ರಭು ಸ್ವಾಮೀಜಿ ಹೇಳಿದರು.
ನಗರದ ಹೊಳಲ್ಕೆರೆ ರಸ್ತೆಯಲ್ಲಿ ರಾಮರಾಜ್ ಕಾಟನ್-ಲೆನಿನ್ ಶೋರೂಂ ಉದ್ಘಾಟಿಸಿ ಮಾತನಾಡಿದ ಶ್ರೀಗಳು, ದೇಶದಲ್ಲಿ 314ನೇ ಹಾಗೂ ಕರ್ನಾಟಕದಲ್ಲಿ 65ನೇಯದ್ದಾಗಿ ಚಿತ್ರದುರ್ಗ ಶೋರಂಗೆ ಇಂದು ಚಾಲನೆ ಸಿಕ್ಕಿದೆ. ಕಾಯಕ ನಿಷ್ಠೆಯ ಪ್ರತೀಕವಾಗಿ ರಾಮರಾಜ್ ಸಂಸ್ಥೆ ತನ್ನ ವಹಿವಾಟನ್ನು ವಿಸ್ತರಿಸುತ್ತಿದೆ. ಅಮೆರಿಕ, ಆಸ್ಟ್ರೇಲಿಯಾ, ಲಂಡನ್‌ನಲ್ಲೂ ಮಳಿಗೆ ಪ್ರಾರಂಭಿಸುವಂತಾಗಲಿ. ಇದರ ವಹಿವಾಟು ವಿಶ್ವಾದ್ಯಂತ ವಿಸ್ತರಿಸಲಿ ಎಂದು ಆಶಿಸಿದರು.
ಬಿಳಿ ಧೋತಿ, ಶರ್ಟ್, ಜುಬ್ಬಾ ಧಿರಿಸು ವಿಶೇಷವಾಗಿ ಕರ್ನಾಟಕ ಸಹಿತ ದಕ್ಷಿಣ ಭಾರತ ಪ್ರಸಿದ್ಧ ಉಡುಗೆಯಾಗಿದೆ. ಒಂದೇ ಸೂರಿನಡಿ ಕುಟುಂಬಕ್ಕೆ ಅಗತ್ಯವಿರುವ ಧಿರಿಸು ಮಾರಾಟ ಮಾಡಲಾಗುತ್ತಿದೆ. ಖಾದಿ, ಕಾಟನ್ ಬಟ್ಟೆ ದೇಹಕ್ಕೆ ತಂಪು ನೀಡುತ್ತದೆ. ಕಾಟನ್ ಉಡುಪು ಮಾರಾಟಕ್ಕೆ ರಾಮರಾಜ್ ಹೆಸರಾಗಿದೆ. ಐತಿಹಾಸಿಕ ನಗರದಲ್ಲಿ ಶೋರೂಂ.ಸ್ಥಾಪನೆಯಾಗಿರುವುದು ಹರ್ಷ ತಂದಿದೆ ಎಂದರು.
ಮಹಾನಟಿ ರಿಯಾಲಿಟಿ ಶೋ ಖ್ಯಾತಿಯ ಗಗನ ಭಾರಿ ಮಾತನಾಡಿ, ನಮ್ಮ ಚಿತ್ರದುರ್ಗದಲ್ಲಿ ಈ ಮಳಿಗೆ ಆರಂಭವಾಗಿರುವುದು ಹರ್ಷವನ್ನುಂಟು ಮಾಡಿದೆ. ನಮ್ಮ ಈ ನಗರದಲ್ಲಿ ಹೆಸರಾಂಥ ಮಳಿಗೆಗಳು ಸ್ಥಾಪನೆ ಆಗುತ್ತಿರುವುದು ಜಿಲ್ಲೆಯ ಅಭಿವೃದ್ಧಿಯ ಸಂಕೇತವಾಗಿದೆ. ಶಾಂಪಿಂಗ್‌ಗೆ ಹೆಚ್ಚಿನ ಆಯ್ಕೆಗಳು ದೊರಕುವಂತಾಗಿದೆ. ಉದ್ಯೋಗ ಅವಕಾಶಗಳು ಕೂಡ ಹೆಚ್ಚಾಗಲಿದೆ ಎಂದ ಅವರು, ರಾಮರಾಜ್ ಉತ್ಪನ್ನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ರಾಮರಾಜ್ ಕಂಪನಿಯ ಹತ್ತಿ ಶರ್ಟ್ ಮತ್ತು ಧೋತಿ ಧರಿಸುವುದು ನಿಜವಾಗಿಯೂ ಕಣ್ಣಿಗೆ ಹಬ್ಬ ಉಂಟುಮಾಡುತ್ತದೆ ಎಂದು ಸಂಸ್ಥೆ ಅಧ್ಯಕ್ಷ ಕೆ.ಆರ್. ನಾಗರಾಜ್ ಲಿಖಿತ ಸಂದೇಶದಲ್ಲಿ ತಿಳಿಸಿದ್ದಾರೆ.
ರಾಮರಾಜ್ ಹತ್ತಿ ಉತ್ಪನ್ನಗಳು ಯಾವಾಗಲೂ ಅಗ್ರಸ್ಥಾನದಲ್ಲಿವೆ. ಧೋತಿ, ಶರ್ಟ್‌ಗಳಿಗೆ ಭಾರತದ ಅತ್ಯಂತ ವಿಶ್ವಾಸಾರ್ಹ, ಆಕರ್ಷಕ ಬ್ರಾಂಡ್‌ಗಳ ಪಟ್ಟಿಯಲ್ಲಿ ರಾಮರಾಜ್ ಸ್ಥಾನ ಪಡೆದಿದೆ.
ದಕ್ಷಿಣ ಭಾರತದ ರಾಜ್ಯಗಳಲ್ಲಿ ಬಿಳಿ ಬಟ್ಟೆಗಳ ಮಾರಾಟದಲ್ಲಿ ನಮ್ಮ ಕಂಪನಿ ಉತ್ತಮ ಪ್ರಗತಿ ಸಾಧಿಸಿದೆ. ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಉಳಿಸಲು ಉತ್ಸುಕವಾಗಿರುವ ಕಂಪನಿ ತಮಿಳುನಾಡಿನ ಎಲ್ಲ ಪ್ರಮುಖ ಕೇಂದ್ರಗಳಲ್ಲಿ ಶೋರೂಂಗಳನ್ನು ತೆರೆದಿದೆ. ವಿಶ್ವಾದ್ಯಂತ ಭಾರತೀಯರಿಗಾಗಿ ಆನ್‌ಲೈನ್ ಮಾರಾಟ ಪ್ರಾರಂಭಿಸಿದೆ. ಶ್ರೀಲಂಕಾ, ಸಿಂಗಪುರ, ಮಲೇಶಿಯಾ ಮತ್ತಿತರ ದೇಶಗಳಿಗೆ ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ ಎಂದು ತಮ್ಮ ಶೋರಂಗಳಲ್ಲಿ ಮಾರಾಟವಾಗುವಂಥ ಹಲವು ಉತ್ಪನ್ನಗಳನ್ನು ಕುರಿತು ವಿವರಿಸಿದ್ದಾರೆ.
ದಕ್ಷಿಣ ಭಾರತದ ಪ್ರಮುಖ ನಗರಗಳು ಮತ್ತು ವಿಮಾನ ನಿಲ್ದಾಣಗಳಲ್ಲೂ ಕೂಡ ಶೋರೂಂಗಳನ್ನು ತೆರೆಯಲಾಗುತ್ತಿದೆ ಎಂದು ತಿಳಿಸಿದ್ದಾರೆ.
ರಾಮರಾಜ್ ಸಂಸ್ಥೆ ಉಪಾಧ್ಯಕ್ಷ ಸೆಂಥಿಲ್ ಕುಮಾರ್, ಎಜಿಎಂ ರಾಜೇಶ್, ಕಟ್ಟಡ ಮಾಲೀಕ ರಾಜಶೇಖರ್, ಅರ್ಜುನ್, ರಕ್ಷಿತಾ,ನಾಗರಾಜ್, ಪ್ರೇಮಾ ಮತ್ತಿತರರು ಇದ್ದರು.