ಬಿಲಗುಂದಿ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲು

3103 KLB 03
Published on

ಕಲಬುರಗಿ: ಪ್ರತಿಷ್ಠಿತ ಹೈದರಾಬಾದ್ ಶಿಕ್ಷಣ ಸಂಸ್ಥೆಯ (ಎಚ್‌ಕೆಇ) ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಕಾಲೇಜಿನ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳ ೮೧.೨೧ ಕೋಟಿ ರೂ. ಸ್ಟೆÊಫಂಡ್ ದುರ್ಬಳಕೆ ಆರೋಪದಡಿ ಸಂಸ್ಥೆ ನಿಕಟಪೂರ್ವ ಅಧ್ಯಕ್ಷ ಭೀಮಾಶಂಕರ ಬಿಲಗುಂದಿ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
ಸಂತ್ರಸ್ತ ವಿದ್ಯಾರ್ಥಿಗಳು, ವಕೀಲ ವಿನೋದಕುಮಾರ ಜನೇವರಿ ನೀಡಿದ ದೂರಿನಂತೆ, ಸೈಬರ, ಆರ್ಥಿಕ ಮತ್ತು ಮಾದಕವಸ್ತು ತಡೆ (ಸೆನ್) ಠಾಣೆಯಲ್ಲಿ ಸಂಸ್ಥೆ ಮಾಜಿ ಅಧ್ಯಕ್ಷ ಭೀಮಾಶಂಕರ ಬಿಲಗುಂದಿ, ಪ್ರಾಂಶುಪಾಲ ಡಾ.ಎಸ್.ಎಂ.ಪಾಟೀಲ್, ಕಾಲೇಜಿನ ಅಕೌಂಟೆAಟ್ ಸುಭಾಷ ಜಗನ್ನಾಥ ಮತ್ತಿ ಕೆನರಾ ಬ್ಯಾಂಕ್ ಎಂಆರ್‌ಎAಸಿ ಶಾಖೆಯ ವ್ಯವಸ್ಥಾಪಕ ವಿರುದ್ಧ ಪ್ರಕರಣ ದಾಖಲಾಗಿದೆ.
ವಿದ್ಯಾರ್ಥಿಗಳ ಖಾತೆಗೆ ಸ್ಟೆÊಫಂಡ್ ಹಣ ಜಮೆ ಮಾಡಿಸಿದ್ದ ಆರೋಪಿಗಳು, ಬಳಿಕ ವಿದ್ಯಾರ್ಥಿಗಳಿಂದ ಖಾಲಿ ಚೆಕ್‌ಗಳಿಗೆ ಅಕ್ರಮವಾಗಿ ಸಹಿ ಪಡೆದಿದ್ದರು. ಅಕ್ರಮವಾಗಿ ಹಣ ವಿತ್‌ಡ್ರಾ ಮಾಡಿಕೊಂಡು ತಮ್ಮ ಸ್ವಂತಕ್ಕೆ ಬಳಸಿ ವಂಚನೆ ಎಸಗಿz್ದÁರೆ ಎಂದು ಆರೋಪಿಸಲಾಗಿದೆ. ನಾಲ್ವರು ಆರೋಪಿಗಳು ಸೇರಿ ೨೦೧೮ರಿಂದ ೨೦೨೪ರ ವರೆಗೆ ೨೮೨ ಪಿಜಿ ವೈದ್ಯಕೀಯ ವಿದ್ಯಾರ್ಥಿಗಳ ೮೧.೨೧ ಕೋಟಿ ರೂ. ಸ್ಟೆÊಫಂಡ್ ಹಣ ದುರ್ಬಳಕೆ ಮಾಡಿಕೊಂಡಿz್ದÁರೆ ಎಂದು ದೂರು ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net