

ಚಿಕ್ಕಮಗಳೂರು: ಕೆಲ ಕಾಲ ಬದುಕಿ ಚಿರ ಕಾಲ ಉಳಿದ ಭಗವಾನ್ ಬಿರ್ಸಾ ಮುಂಡಾ ಅವರ ಜೀವನ ಸ್ಫೂರ್ತಿದಾಯಕ. ಬುಡಕಟ್ಟು ಸಮುದಾಯದ ಜನರು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿಬೇಕು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದರು.
ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ ಭಾರತ ಸರ್ಕಾರ, ಜಿಲ್ಲಾಡಳಿತ, ಜಿಪಂ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ನಗರದ ಕುವೆಂಪು ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ಭಗವಾನ್ ಬಿರ್ಸಾ ಮುಂಡ ಅವರ ೧೫೦ನೇ ಜಯಂತಿ (ಜನಜಾತೀಯ ಗೌರವ್ ದಿವಸ್) ಧರ್ತಿ ಆಬಾ ಜನಜಾತೀಯ ಗ್ರಾಮ ಉತ್ಕರ್ಷ್ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶದ ಸ್ವಾತಂತ್ರö್ಯಕ್ಕಾಗಿ ಪ್ರಾಣವನ್ನು ತ್ಯಾಗ ಮಾಡಿ ತಮ್ಮ ಇಡೀ ಜೀವನವನ್ನು ದೇಶಕ್ಕಾಗಿ ಮುಡಿಪಾಗಿಟ್ಟ ಅನೇಕ ವೀರರನ್ನು, ಸ್ವಾತಂತ್ರö್ಯ ಹೋರಟಗಾರರ ಚರಿತ್ರೆಯನ್ನು ಇತಿಹಾಸದ ಮೂಲಕ ತಿಳಿದುಕೊಳ್ಳಬಹುದಾಗಿದೆ. ಸ್ವಾತಂತ್ರö್ಯದ ಜೊತೆಗೆ ಸ್ವಾಭಿಮಾನ ಹಾಗೂ ಬುಡಕಟ್ಟು ಸಮುದಾಯದ ಜನರ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಹಕ್ಕುಗಳಿಗಾಗಿ ಹೋರಾಡಿ ಬುಡಕಟ್ಟು ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಿದ ಬಿರ್ಸಾ ಮುಂಡಾ ಅವರ ಜೀವನ ಸಾಧನೆಗಳು ಶ್ಲಾಘನೀಯವಾಗಿವೆ ಎಂದರು.
ಬುಡಕಟ್ಟು ಜನರನ್ನು ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಅಭಿವೃದ್ಧಿಪಡಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಉz್ದೆÃಶದಿಂದ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಜಿಲ್ಲಾಡಳಿತವು ಕ್ಲಿಷ್ಟಕರ ಪರಿಸ್ಥಿತಿಯಲ್ಲಿರುವ ಬುಡಕಟ್ಟು ಜನಾಂಗದ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಅವರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲಾಗುತ್ತಿದೆ. ಏಕಲವ್ಯ, ಆಶ್ರಮಶಾಲೆ, ನವೋದಯದಂತಹ ವಸತಿ ಶಾಲೆಗಳನ್ನು ತೆರೆದು ಉಚಿತ ಹಾಗೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಶಿಕ್ಷಣದಿಂದ ತಮ್ಮ ಕನಸಿನ ಹುದ್ದೆಗಳನ್ನು ಪಡೆಯಬಹುದು. ಜೀವನದ ಗುಣಮಟ್ಟ ಉತ್ತಮಗೊಳಿಸಲು ಶಿಕ್ಷಣ ಒಂದೇ ಸೂಕ್ತ ಮಾರ್ಗ. ಬುಡಕಟ್ಟು ಸಮುದಾಯದ ಪ್ರತಿಯೊಬ್ಬರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಅವರನ್ನು ಬೆಳೆಸಬೇಕು. ತಮ್ಮ ವೃತ್ತಿ ಪೂರಕ ಚಟುವಟಿಕೆಗಳಲ್ಲಿ ತೊಡಗಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಕರೆ ನೀಡಿದರು.
ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬುಡಕಟ್ಟು ಜನರ ಜೀವನ ಕ್ರಮ, ಆಚಾರ ವಿಚಾರ ಹಾಗೂ ಸಂಸ್ಕೃತಿ ಸಂಪ್ರದಾಯಗಳು ವಿಶೇಷವಾದವು. ಭಗವಾನ್ ಬಿರ್ಸಾ ಮುಂಡ ಅವರು ಬುಡಕಟ್ಟು ಸಮುದಾಯ ಜನರ ಹಕ್ಕು ಹಾಗೂ ಉತ್ತಮ ಸಾಮಾಜಿಕ ಜೀವನ ನಿರ್ವಹಣೆಗಳಿಗಾಗಿ ಬ್ರಿಟಿಷರಿಗೆ ತಾನೊಬ್ಬನೇ ಒಂದು ದಂಡಾಗಿ ಕಾಣಿಸಿಕೊಳ್ಳುವಂತೆ ವ್ಯವಸ್ಥೆಯ ವಿರುದ್ಧ ಹೋರಾಡಿದ್ದಾರೆ. ಸ್ವಾಭಿಮಾನಕ್ಕಾಗಿ ಶಿಕ್ಷಣದಿಂದ ವಂಚಿತರಾದ ಅವರು ಸಮುದಾಯಕ್ಕಾಗಿ ತಮ್ಮ ಜೀವನವನ್ನೆ ಮುಡಿಪಾಗಿಟ್ಟಿದ್ದರು. ತಮ್ಮದೇ ಆದ ಕುಲ ಕಸುಬುಗಳ ಮೂಲಕ ಜೀವನ ನಿರ್ವಹಿಸುವ ಇಂದಿನ ಸಮುದಾಯದ ಅನೇಕರು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಪ್ರಸ್ತುತ ಯುಗದಲ್ಲಿ ಶಿಕ್ಷಣ ಬಹುಮುಖ್ಯವಾದುದು. ಶಿಕ್ಷಣ ಪಡೆಯುವುದರ ಮೂಲಕ ಸಮಾಜದಲ್ಲಿ ತಮಗಿರುವ ಹಕ್ಕು ಕರ್ತವ್ಯಗಳನ್ನು ತಿಳಿದು ತಮಗೆ ದೊರಕ ಬೇಕಾಗಿರುವ ಸೌಲಭ್ಯಗಳನ್ನು ಧೈರ್ಯದಿಂದ ಪಡೆಯಬಹುದಾಗಿದೆ ಎಂದರು.
ಸಮುದಾಯದ ಜನರು ಒಂದು ಸ್ಥಳದಲ್ಲಿ ನೆಲೆಯೂರಿ ಅಲೆಮಾರಿ ಜೀವನಕ್ಕೆ ಅಂತ್ಯಹಾಡಬೇಕು. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಮಾಜದ ಉತ್ತಮ ಪ್ರಜೆಗಳಾಗಿ ರೂಪಿಸುವುದು ಪ್ರತಿಯೊಬ್ಬರ ಕರ್ತವ್ಯ. ಬುಡಕಟ್ಟು ಜನಾಂಗದ ಜನರು ಸಂಘಟಿತರಾಗಿ ರಾಜಕೀಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ತಮ್ಮ ಜೀವನವನ್ನು ಉತ್ತಮ ಪಡಿಸಿಕೊಳ್ಳಿ ಎಂದು ಹೇಳಿದರು.
ರಾಷ್ಟಿçÃಯ ಆದಿವಾಸಿ ಅಂದೋಲನ ಹಾಗೂ ಜಿಲ್ಲಾ ಬುಡಕಟ್ಟು ಕೃಷಿಕ ಸಂಘದ ಮುಖಂಡೆ ಎಚ್.ಎಸ್.ಜ್ಯೋತಿ, ಸತ್ತಿಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ವಿಶ್ವನಾಥ್ ಭಗವಾನ್ ಬಿರ್ಸಾ ಮುಂಡ ಅವರ ಜೀವನ ಸಾಧನೆಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ಬಿರ್ಸಾ ಮುಂಡ ಜಯಂತಿ ಅಂಗವಾಗಿ ಏಕಲವ್ಯ ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಬಹುಮಾನ ನೀಡಲಾಯಿತು.
ಕಾರ್ಯಕ್ರದಲ್ಲಿ ಜಿಪಂ ಸಿಇಒ ಎಚ್.ಎಸ್.ಕೀರ್ತನಾ, ಎಸ್‌ಪಿ ವಿಕ್ರಮ ಅಮಟೆ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಯೋಜನಾ ಸಮನ್ವಯಾಧಿಕಾರಿ ಎಚ್.ಸಿ.ಬಾಗೀರಥಿ, ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೇಶ್, ಆದಿವಾಸಿ ಪರಿಷತ್ ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ್ ಗೌಡ, ಮೇದಾ ಸಮುದಾಯದ ಮುಖಂಡೆ ಶೋಭಾ, ದಲಿತ ಮುಖಂಡರಾದ ಕೆ.ಟಿ ರಾಧಕೃಷ್ಣ, ಹುಣಸೆಮಕ್ಕಿ ಲಕ್ಷö್ಮಣ್, ಮರ್ಲೆ ಅಣ್ಣಯ್ಯ ಮತ್ತಿತರರಿದ್ದರು.