ಬಿರುಸಿನ ಮಳೆಗೆ ಜನ ಜೀವನ ಅಸ್ತವ್ಯಸ್ತ

18-kkr,,2
ಕಿಕ್ಕೇರಿಯಲ್ಲಿ ಶನಿವಾರ ಸಂಜೆ ವರ್ಷದ ಮೊದಲು ಮಳೆ ಸುರಿದು ಕಟ್ಟಿದ್ದ ಮೋರಿ ಶುಚಿಯಾಯಿತು.
Published on

ಕಿಕ್ಕೇರಿ: ಪಟ್ಟಣ ಸೇರಿದಂತೆ ಹೋಬಳಿಯ ವಿವಿಧೆಡೆ ಶನಿವಾರ ಸಂಜೆ ಬಿರುಸಿನ ಮಳೆ ಸುರಿಯಿತು.

ವರ್ಷದ ಮೊದಲ ಮಳೆಯಾಗಿ ಬಿರುಸಿನಿಂದ ಸುರಿದು ಜನಜೀವನ ಅಸ್ತವ್ಯಸ್ತಗೊಳಿಸಿತು.

ತ್ಯಾಜ್ಯದಿಂದ ಕಟ್ಟಿದ ಮೋರಿಗಳು ಬಹುತೇಕ ಶುಚಿಯಾಯಿತು. ದ್ವಿಚಕ್ರವಾಹನ ಸವಾರರು ದಿಢೀರನೆ ಸುರಿದ ಮಳೆಯಲ್ಲಿಯೇ ನೆನೆದುಕೊಂಡು ಮನೆ ಸೇರಲು ಪರದಾಡಿದರು. ಕಾದ ಬಾಣಲೆಯಂತಾಗಿದ್ದ ಭೂಮಿ ತುಸು ತಂಪಾಯಿತು.

ಸುಮಾರು ಅರ್ಧ ತಾಸು ಸುರಿದ ಮಳೆಗೆ ಬೇಸಿಗೆಯ ಸೆಕೆ ನೀಗಿಸಿತು. ರೈತರು ಕೃಷಿ ಚಟುವಟಿಕೆ ಮುಗಿಸಿಕೊಂಡು ಮನೆ ಸೇರಲು ಪರಿತಪಿಸಿದರು. ಬೀದಿ ಬದಿ ವ್ಯಾಪಾರಿಗಳು ಮಳೆಯಿಂದ ತೊಯ್ದು ಸಾಮಗ್ರಿಗಳನ್ನು ಮಳೆಯಿಂದ ರಕ್ಷಿಸಿಕೊಳ್ಳಲು ಹೈರಾಣವಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net