ಬಿರುಸಿನ ಮಳೆ ತಂಪಾದ ಇಳೆ

Rain
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.63357127, 0.22585729);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 40;
Published on

ಚಿತ್ರದುರ್ಗ: ನಗರ ಸೇರಿ ಜಿಲ್ಲೆಯ ಹಲವೆಡೆ ಗುರುವಾರ ಮಧ್ಯಾಹ್ನ 2ರ ನಂತರ ಅರ್ಧ ತಾಸು ಸುರಿದ ಬಿರುಸಿನ ಮಳೆಯಿಂದಾಗಿ ಇಳೆ ತಂಪಾಯಿತು. ಸುಡು ಬಿಸಿಲಿನ ಝಳಕ್ಕೆ ತತ್ತರಿಸಿದ್ದ ನಾಗರಿಕರಿಗೆ ಕೆಲ ಹೊತ್ತು ತಂಪಾದ ಅನುಭವ ನೀಡಿತು. ಮಳೆಯಿಂದಾಗಿ ಎಲ್ಲಿಯೂ ಹಾನಿ ಉಂಟಾಗಿಲ್ಲ ಎಂಬ ಮಾಹಿತಿ ಇದೆ.

ಕೆಲ ತಗ್ಗು ಪ್ರದೇಶದ ರಸ್ತೆಗಳಲ್ಲಿ ಇದ್ದಕ್ಕಿದ್ದಂತೆ ರಭಸವಾಗಿ ಸುರಿದ ಮಳೆಯಿಂದಾಗಿ ಚರಂಡಿಗಳು ತುಂಬಿ ಹರಿದವು. ಇದರಿಂದಾಗಿ ಹೊರಬಂದ ಕೊಳಚೆ ನೀರಿನೊಂದಿಗೆ ತ್ಯಾಜ್ಯ ಮಾರ್ಗವನ್ನು ಸಂಪೂರ್ಣ ಆವರಿಸಿತು. ಹೀಗಾಗಿ ವಾಹನ ಸವಾರರು, ಜನ ಪರದಾಡುವಂತಾಯಿತು.

ಮಧ್ಯಾಹ್ನ ಮೋಡಕವಿದ ವಾತಾವರಣ ನಿರ್ಮಾಣವಾಗಿತ್ತು. 2ರ ನಂತರ ಕೆಲ ಭಾಗಗಳಲ್ಲಿ ಮಳೆ ಬಿರುಸು ಪಡೆಯಿತು. ಅರ್ಧ ತಾಸಿನ ಬಳಿಕ ಕೆಲಕಾಲ ತುಂತುರು ಮಳೆ ಸುರಿಯಿತು. ಈರಜ್ಜನಹಟ್ಟಿ ಗ್ರಾಮದಲ್ಲಿ ಕೆಲ ನಿಮಿಷ ಹದ ಮಳೆಯಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net