ಬಿರುಗಾಳಿ ಸಹಿತ ಮಳೆ

Capture2
Published on

ಸವಕಲ್ಯಾಣ: ಶುಕ್ರವಾರ ಮಧ್ಯಾಹ್ನ ಬಿರುಗಾಳಿ ಸಹಿತ ಸುರಿದ ಮಳೆಯಲ್ಲಿ ಹಲವೆಡೆ ಗಿಡ-ಮರಗಳು ಧರೆಗುರುಳಿವೆ. ನಗರದ ತಾಪಂ ಆವರಣದಲ್ಲಿ ನಿಂತಿದ್ದ ಎರಡು ಕಾರುಗಳ ಮೇಲೆ ಬೇವಿನ ಮರವೊಂದು ಉರುಳಿಬಿದ್ದು ಜಖಂಗೊಂಡಿವೆ. ಸಕರ್ಾರಿ ಕಲ್ಯಾಣ ಮಂಟಪ ರಸ್ತೆಯಲ್ಲಿ ದ್ವಿಚಕ್ರ ವಾಹನದ ಮೇಲೆ ಮರ ಉರುಳಿಬಿದ್ದು ನುಜ್ಜುಗುಜ್ಜಾಗಿದೆ.

ರಥ ಮೈದಾನ, ಹರಳಯ್ಯ ವೃತ್ತ, ನಾರಾಯಣಪುರ ಕ್ರಾಸ್ ಸೇರಿದಂತೆ ಕೆಲವೆಡೆ ರಸ್ತೆ ಮೇಲೆ ಮರಗಳು ಉರುಳಿಬಿದ್ದು ಕೆಲ ಕಾಲ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ನಗರಸಭೆ ಸಿಬ್ಬಂದಿ ಮರಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಮಳೆಯಿಂದ ನಗರದ ಬಸ್ ನಿಲ್ದಾಣದ ರಸ್ತೆ ಸೇರಿದಂತೆ ಹಲವೆಡೆ ರಸ್ತೆಗಳು ಜಲಾವೃತಗೊಂಡು ಸಂಚಾರಕ್ಕೆ ಸಮಸ್ಯೆ ಉಂಟಾಯಿತು. ಶಿವಾಜಿ ವೃತ್ತದ ಬಳಿ ಕೆಲ ಮನೆಗಳಿಗೆ ನೀರು ನುಗ್ಗಿ ದವಸ ಧಾನ್ಯಗಳು ನೀರು ಪಾಲಾದ ಪ್ರಸಂಗ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net