ಬಿರುಗಾಳಿ ರಭಸಕ್ಕೆ ಬಾಳೆ ಬೆಳೆಗೆ ಹಾನಿ

19hgr1
ಬಿರುಗಾಳಿಗೆ ಬಾಳೆ ಗಿಡಗಳು, ತೆಂಗಿನ ಮರಗಳು ಹಾನಿಯಾಗಿರುವುದು.
Published on

ಹಲಗೂರು: ಅಂತರವಳ್ಳಿ ಗ್ರಾಮದಲ್ಲಿ ಬಿರುಗಾಳಿ ಸಹಿತ ಮಳೆಗೆ ಬಾಳೆ ಫಸಲು ಹಾನಿಯಾಗಿದೆ.

ಅಂತರಳ್ಳಿ ಗ್ರಾಮದ ಹುಚ್ಚರಸಮ್ಮ ಅವರು ಎರಡು ಎಕರೆ ಜಮೀನಿನಲ್ಲಿ ಬಾಳೆ ಬೆಳೆದಿದ್ದರು. ಉತ್ತಮ ಫಸಲು ಬಂದಿದ್ದು, ಇನ್ನು ಕೆಲವೇ ದಿನಗಳಲ್ಲಿ ಬಾಳೆ ಕಟಾವು ಮಾಡಬೇಕಾಗಿತ್ತು. ಆದರೆ, ಶನಿವಾರ ಸಂಜೆ ಬಿರುಗಾಳಿಗೆ ಬಹುತೇಕ ಗಿಡಗಳು ನೆಲಕಚ್ಚಿವೆ. ಆರು ತೆಂಗಿನ ಮರಗಳು ಉರುಳಿ ಬಿದ್ದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net