

ಚಿತ್ರದುರ್ಗ:ಬಿಯರ್ ತುಂಬಿದ್ದ ಲಾರಿ ಪಲ್ಟಿ ಹೊಡೆದ ಘಟನೆ ಹೊಳಲ್ಕೆರೆ ಕಣಿವೆ ಐಟಿಐ ಕಾಲೇಜು ಬಳಿ ಭಾನುವಾರ ಬೆಳಗಿನ ಜಾವ ನಡೆದಿದೆ. ಹಾಸನದಿಂದ ಕಲಬುರಗಿಗೆ ಬಿಯರ್ ಸಾಗಿಸುತ್ತಿದ್ದ ಲಾರಿಗೆ ಕಾಡು ಪ್ರಾಣಿಯೊಂದು ಹಠಾತ್ತನೆ ಅಡ್ಡ ಬಂದಿದ್ದು,ಅದನ್ನು ಉಳಿಸ ಲೆಂದು ಚಾಲಕ ಲೋಹಿತ್ ಸಡನ್ ಬ್ರೇಕ್ ಹಾಕಿದ್ದರಿಂದಾಗಿ ಅವಘಡವಾಗಿದೆ. ಘಟನೆಯಲ್ಲಿ ಕ್ಲೀನರ್, ಹಾಸನ ಜಿಲ್ಲೆ ಗುಡ್ಡೇನಹಳ್ಳಿ ಚಂದ್ರ ಶೇಖರ್‌ಗೆ ಗಾಯಗಳಾಗಿದ್ದು,ಅಂದಾಜು 14 ಲಕ್ಷ ರೂ.ಮೌಲ್ಯದ ಬಿಯರ್‌ಬಾಟಲಿಗಳು ಒಡೆದು ನಷ್ಟವಾಗಿದೆನ್ನಲಾಗಿದ್ದು,ಅಬಕಾರಿ ಅಧಿ ಕಾರಿಗಳ ಪರಿಶೀಲನೆ ಬಳಿಕ ನಷ್ಟದ ನಿಖರತೆ ಗೊತ್ತಾಗಲಿದೆ. ಹೊಳಲ್ಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.