ಬಿಮ್ಸ್‌ನಲ್ಲಿ ಶವ ಪತ್ತೆ

BIMS Hospital Belagavi 5 MAY 20
Published on

ಬೆಳಗಾವಿ: ನಗರದ ಬಿಮ್ಸ್ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿನ ಕೋವಿಡ್ ವಾರ್ಡ್ ಎದುರು 24 ಗಂಟೆಗಳಿಂದ ಅಪರಿಚಿತ ಶವ ಬಿದ್ದಿದ್ದರೂ ಆಸ್ಪತ್ರೆ ಸಿಬ್ಬಂದಿ, ತಮಗೇನೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸಿದ ಆರೋಪ ಕೇಳಿ ಬಂದಿದೆ.

ಶವ ಬಿದ್ದಿದ್ದರೂ ಸಿಬ್ಬಂದಿ ಯಾರೂ ತಪಾಸಣೆ ಮಾಡಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಸುರೇಂದ್ರ ಅನಗೋಳಕರ್ ಆರೋಪಿಸಿದ್ದಾರೆ. ಈ ಬಗ್ಗೆ ಸ್ಥಳೀಯರು ಫೋನ್ ಕರೆ ಮಾಡಿ ಮಾಹಿತಿ ನೀಡಿದರು. ನಾವು ಬಂದು ನೋಡಿದಾಗ ವ್ಯಕ್ತಿ ಮೃತಪಟ್ಟಿರುವುದು ಗೊತ್ತಾಗಿದೆ. ಕೋವಿಡ್ ವಾರ್ಡ್ ಬಳಿ ಶವ ಬಿದ್ದಿದ್ದರೂ ಆಸ್ಪತ್ರೆ ಸಿಬ್ಬಂದಿ ತಿರುಗಿ ನೋಡಿಲ್ಲ ಎಂದು ಸುರೇಂದ್ರ ಅವರು ಬಿಮ್ಸ್ ಆಡಳಿತ ಮಂಡಳಿ ವಿರುದ್ಧ ಅಸಮಾಧಾನ ಹೊರಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net