ಬಿಬಿಸಿ ಮೇಲಿನ ದಾಳಿ ಖಂಡಿಸಿ ಮೌನ ಪ್ರತಿಭಟನೆ

ಬಿಬಿಸಿ ಮೇಲಿನ ದಾಳಿ ಖಂಡಿಸಿ ಮೌನ ಪ್ರತಿಭಟನೆ
Published on


ಹಾಸನ: ಬಿಬಿಸಿ ಸುದ್ದಿ ಸಂಸ್ಥೆ ಕಚೇರಿ ಮೇಲೆ ಐಟಿ ದಾಳಿ ಮಾಡಿರುವುದನ್ನು ಖಂಡಿಸಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಬುಧವಾರ ಮೌನ ಮೆರವಣಿಗೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.


ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆವರಣದಿಂದ ಹೊರಟ ಪತ್ರಕರ್ತರು ಬಿ.ಎಂ.ರಸ್ತೆ, ಎನ್.ಆರ್.ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣ ತಲುಪಿದರು. ಅಲ್ಲಿ ಕೆಲ ಹೊತ್ತು ಮೌನವಾಗಿಯೇ ಪ್ರತಿಭಟನೆ ನಡೆಸಿ ಘಟನೆಗೆ ಖಚಿಡನೆ ವ್ಯಕ್ತಪಡಿಸಿದರು.
ಈ ವೇಳೆ ಸಂಘದ ಜಿಲ್ಲಾಧ್ಯಕ್ಷÀ ಬಾಳ್ಳುಗೋಪಾಲ್ ಮಾತನಾಡಿ, ಬಿಬಿಸಿಯಲ್ಲಿ ಗುಜರಾತ್ ಹತ್ಯಾಕಾಂಡ ಸಂಬAಧಿಸಿದ ಸಾಕ್ಷ್ಯಚಿತ್ತ ಪ್ರಸಾರ ಮಾಡಿದ ಬೆನ್ನಲ್ಲೇ ಐಟಿ ದಾಳಿ ನಡೆದಿರುವುದನ್ನು ನೋಡಿದರೆ, ಮಾಧ್ಯಮವನ್ನು ಭಯದಲ್ಲಿಟ್ಟು, ಅಭಿವ್ಯಕ್ತಿ ಸ್ವಾತಂತ್ರ‍್ಯ ಹತ್ತಿಕ್ಕುವ ಪ್ರಯತ್ನ ಇದಾಗಿದೆ ಎನ್ನಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.


ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಅವರ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ‍್ಯ ಇದೆ. ನಾಲ್ಕನೇ ಅಂಗವೆದು ಕರೆಯುವ ಮಾಧ್ಯಮ ಬಲಿಷ್ಠವಾಗಿದ್ದರೆ ಮಾತ್ರ ಪ್ರಜಾಪ್ರಭುತ್ವ ಆರೋಗ್ಯಕರವಾಗಿ ಮತ್ತು ಸದೃಢವಾಗಿರಲು ಸಾಧ್ಯ. ಆದರೆ ಮಾಧ್ಯಮವನ್ನು ಹೆದರಿಸಿ ಭಯದಲ್ಲಿರಿಸುವ ಯಾವುದೇ ಪ್ರಯತ್ನಗಳು ಖಂಡನೀಯ. ಇಂತಹ ಘಟನೆ ಮತ್ತೆ ಮರುಕಳಿಸದಂತೆ ಮನವಿ ಮಾಡಿದರು.


ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಮಂಜು ಬನವಾಸೆ, ಉಪಾಧ್ಯಕ್ಷ ಕೆ.ಎಚ್.ವೇಣುಕುಮಾರ್, ಖಜಾಂಚಿ ಕುಮಾರ್, ಕಾರ್ಯದರ್ಶಿಗಳಾದ ನಟರಾಜು, ಕೆ.ಎಂ. ಹರೀಶ್, ಮಾಜಿ ಅಧ್ಯಕ್ಷ ಕೆ.ಆರ್. ಮಂಜುನಾಥ್, ಬಿ.ಸಿ.ಶಶಿಧರ್, ಸ್ವರೂಪ್, ಅತೀಖ್ ಉರ್ ರೆಹಮಾನ್, ಜಗದೀಶ್, ಎಂ.ಬಿ.ಶಿವರಾಮ್, ತೌಫಿಕ್, ಸ್ವಾಗತ್, ಅನಂತರಾಜು, ಕುಶ್ವಂತ್, ಸತೀಶ್, ನಾಗರಾಜು, ಅಂಬಿಕಾ, ಕಾವ್ಯಾ, ಸಂತೋಷ್, ನಾಗೇಶ್, ಆನಂದ್ ಪಟೇಲ್, ಮಂಜುನಾಥ್, ಕೃಷ್ಣ, ಅನಿಲ್, ರಘುನಂದನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net