ಬಿಪಿಎಲ್ ಕಾಡ್೯ದಾರರಿಗೆ ಐವಿಯುಎಸ್ ಚಿಕಿತ್ಸೆ

Dr Nitin Gudage
Published on

ಬೀದರ್: ಹೃದಯ ಸಂಬಂಸಿದ ಶಸ್ತ್ರ ಚಿಕಿತ್ಸೆಗಾಗಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಇಂಟ್ರಾ ವ್ಯಾಸ್ಕ್ಯೂಲರ್ ಅಲ್ಟ್ರಾಸೌಂಡ್ (ಐವಿಯುಎಸ್)  ಚಿಕಿತ್ಸೆ ಇಲ್ಲಿನ ಗುದಗೆ ಆಸ್ಪತ್ರೆಯಲ್ಲಿ ಲಭ್ಯವಿದೆ. ಕಲ್ಯಾಣ ಕರ್ನಾಟಕದಲ್ಲಿ ಪ್ರಥಮ ಬಾರಿ ಈ ಚಿಕಿತ್ಸೆ ಕೊಡಲಾಗುತ್ತಿದ್ದು, ಬಿಪಿಎಲ್ ಮತ್ತು  ಯಶಸ್ವಿನಿ ಕಾಡ್೯ ಹೊಂದಿದವರಿಗೆ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ಗುದಗೆ ಸೂಪರ್ ಸ್ಪೆಷಾಲಿಟಿ ಆ್ಯಂಡ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹೃದ್ರೋಗ ತಜ್ಞ ಡಾ.ನಿತೀನ್ ಗುದಗೆ ಹೇಳಿದರು.

ಹಾಟ್೯ ಅಟ್ಯಾಕ್ ಗೆ ಒಳಗಾದ ಭಾಲ್ಕಿಯ ನರಸಿಂಗರಾವ್ (60) ಎಂಬುವವರಿಗೆ ಈ ಪದ್ಧತಿ ಮೂಲಕ ಸೂಕ್ಷ್ಮ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಈ  ರೋಗಿ ಈಗ ಸಂಪೂರ್ಣ ಗುಣಮುಖರಾಗಿದ್ದಾರೆ. ಇಂಥ ಸೂಕ್ಷ್ಮ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿರುವುದು ಇಡೀ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಇದೇ ಮೊದಲ ಬಾರಿ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಹೃದಯದಲ್ಲಿ ಸ್ಟೆಂಟ್ ಯಾವ ಸ್ಥಳದಲ್ಲಿ ಅಳವಡಿಸಲಾಗಿದೆ ಎಂಬುದನ್ನು ತಿಳಿಯಲು ಐವಿಯುಎಸ್ ಚಿಕಿತ್ಸೆ ಬೇಕು. ಇದೊಂದು ಸಣ್ಣ ಕ್ಯಾಮರಾದಂತಿದ್ದು, ಅದಕ್ಕೆ ವೈರ್ ಅಳವಡಿಸಲಾಗಿದೆ. ಎಲ್ಲೆಲ್ಲಿ ಬ್ಲಾಕ್ ಆಗಿದೆ? ಅದು ಎಷ್ಟು ಪ್ರತಿಶತವಿದೆ ಎಂಬುದನ್ನು ಪತ್ತೆ ಹಚ್ಚುತ್ತದೆ. ಅದರ ಆಧಾರದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಯಶಸ್ವಿನಿ, ಬಿಪಿಎಲ್ ಕಾಡ್೯, ಆಯುಷ್ಮಾನ ಭಾರತ ಆರೋಗ್ಯ ಕರ್ನಾಟಕ ಕಾಡ್೯ ಹಾಗೂ ಸರ್ಕಾರಿ ನೌಕರರ ಜ್ಯೋತಿ ಸಂಜೀವಿನಿ ಯೋಜನೆಯಡಿ ಉಚಿತ ಚಿಕಿತ್ಸೆ ನೀಡಲಾಗುವುದು. ಸಾರ್ವಜನಿಕರು ಇದರ ಲಾಭ ಪಡೆದುಕೊಳ್ಳಬೇಕು ಎಂದು ಕೋರಿದರು.

ಗುದಗೆ ಆಸ್ಪತ್ರೆ ವ್ಯವಸ್ಥಾಪಕ ನಿದೇಶಕ ಡಾ.ಚಂದ್ರಕಾಂತ ಗುದಗೆ, ಡಾ.ಸಚಿನ್ ಗುದಗೆ, ಡಾ.ಜೈರಾಜ ಬೊಮ್ಮನ್, ಡಾ.ಮಹೇಶ ತೊಂಡಾರೆ, ವ್ಯವಸ್ಥಾಪಕ ಶ್ರೀಕಾಂತ ಸ್ವಾಮಿ ಸೋಲಪುರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net