

ಕುಕನೂರು(ಕೊಪ್ಪಳ): ತಾಲೂಕಿನ ಬಿನ್ನಾಳ ಗ್ರಾಮದ ಶ್ರಿಶರಣಬಸವೇಶ್ವರ ಜಾತ್ರೋತ್ಸವ ನಿಮಿತ್ತ ಮಹಾ ರಥೋತಸವ ಸೋಮವಾರ ಅದ್ಧೂರಿಯಾಗಿ ಜರುಗಿತು.
ನಂದಿ ಕೋಲುಗಳಿಗೆ ಪೂಜೆ ಸಲ್ಲಿಸಿ ನಂತರ ಗ್ರಾಮ ಪ್ರವೇಶದೊಂದಿಗೆ ಜಾತ್ರೆ ಅದ್ದೂರಿಯಾಗಿ ಪ್ರಾರಂಭವಾಯಿತು. ಭಕ್ತರು ಮಹಾ ರಥೋತ್ಸವಕ್ಕೆ ಉತ್ತತ್ತಿ ಎಸೆಯುವದರ ಮೂಲಕ ತಮ್ಮ ಭಕ್ತಿ, ಇಷ್ಟಾರ್ಥ ಬೇಡಿಕೆಗಳು ದೇವರಲ್ಲಿ ಬೇಡಿಕೊಂಡರು. ಮಹಾ ರಥೋತ್ಸವ ಪಾದ ಗಟ್ಟಿಯಾದ ಗ್ರಾಮದ ಬನ್ನಿ ಕಟ್ಟಿಗೆ ತಲುಪಿ ಪೂಜೆ ಸಲ್ಲಿಸಿ, ಪುನಃ ಮುಖ್ಯ ಸ್ಥಳಕ್ಕೆ ಆಗಮಿಸಿತು.
ಅನ್ನದಾನೇಶ್ವರ ಶಾಖಾ ಮಠದ ಡಾ.ಮಹಾದೇವ ದೇವರು, ಶ್ರೀಬಸವಪ್ರಭು ಸ್ವಾಮೀಜಿ ಸಮ್ಮುಖದಲ್ಲಿ ಸಾಮೂಹಿಕವಾಗಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಬೂದೀಶ್ವರ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು.
ಪ್ರಮುಖರಾದ ಚನ್ನಯ್ಯ ಹಿರೇಮಠ, ಕಳಕಪ್ಪ ಕಂಬಳಿ, ದ್ರಾಕ್ಷಾಯಣಿ ಸಂಗಪ್ಪ ತಹಸಿಲ್ದಾರ್, ಮಹಮ್ಮದ್ ವಾಲಿಕಾರ್, ಲಕ್ಷ್ಮಣ ಚಲವಾದಿ, ಚೆನ್ನಮ್ಮ, ಕಮಲಕ್ಷಿ ಕಂಬಳಿ, ಗುರಪ್ಪ, ಬಸವರಾಜ ಬನ್ನಿಕೊಪ್ಪ, ಸಂಗಪ್ಪ ತಹಸೀಲ್ದಾರ್, ಜೀವನ ಸಾಬ್ ಬಿನ್ನಾಳ ಇತರರಿದ್ದರು.