

ಮೂಡಿಗೆರೆ: ಬಿದರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಬಿ.ಎಸ್.ನಾಗರಾಜ್, ಉಪಾಧ್ಯಕ್ಷರಾಗಿ ಎಂ.ಎಸ್.ಪ್ರಸನ್ನ ಶನಿವಾರ ಅವಿರೋಧವಾಗಿ ಆಯ್ಕೆಯಾದರು.
ನಂತರ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಹಳಸೆ ಶಿವಣ್ಣ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆ ನಡೆಸುವ ರೈತಾಪಿ ವರ್ಗದವರ ಆರ್ಥಿಕ ಭದ್ರತೆಗಾಗಿ ಕೃಷಿ ಪತ್ತಿನ ಸಹಕಾರ ಸಂಘಗಳು ಹೆಚ್ಚಿನ ಪ್ರೋತ್ಸಾಹ ನೀಡುತ್ತಿವೆ. ಸಹಕಾರ ಕ್ಷೇತ್ರದಲ್ಲಿ ನಂಬಿಕೆ, ಪ್ರಾಮಾಣಿಕತೆ ಮುಖ್ಯ. ಸಹಕಾರ ಸಂಘದ ಆಡಳಿತ ಮಂಡಳಿ ಮತ್ತು ಗ್ರಾಹಕರು ಸಮನ್ವಯದಿಂದ ಕಾರ್ಯನಿರ್ವಹಿಸಿದರೆ ಸಂಘದ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು.
ಜಿಲ್ಲಾ ಸಹಕಾರ ಯೂನಿಯನ್ ಬ್ಯಾಂಕ್ ಉಪಾಧ್ಯಕ್ಷ ಜಿ.ಕೆ.ದಿವಾಕರ್, ಮುಖಂಡರಾದ ರಂಜನ್ ಅಜಿತ್‌ಕುಮಾರ್, ದೀಪಕ್ ದೊಡ್ಡಯ್ಯ, ವಿ.ಕೆ.ಶಿವೇಗೌಡ, ಕೆ.ಆರ್.ಕೇಶವ, ಟಿ.ಎಂ.ಗಜೇಂದ್ರ, ಎಂ.ವಿ.ಜಗದೀಶ್, ಒ.ಜಿ.ರವಿ, ಬಿ.ಎನ್.ಜಯಂತ್, ಬಿ.ಎಂ.ಬೈರೇಗೌಡ, ಎಸ್.ಪಿ.ಸಚಿನ್, ಬಿ.ಸಿ.ದಯಾಕತ್, ಸತೀಶ್, ಮಹೇಶ್, ಪ್ರಶಾಂತ್, ಧನಿಕ್ ಕೋಡದಿಣ್ಣೆ, ಪ್ರಶಾಂತ್, ರಕ್ಷಿತ್, ಬಿ.ಟಿ.ಶ್ರೀನಾಥ್, ವಿನಯ್ ಹಳೇಕೋಟೆ, ಬಿ.ಆರ್.ವಿನಯ್, ಎಚ್.ವಿ.ರಾಘವೇಂದ್ರ, ಬಿ.ಸಿ.ದಿನೇಶ್, ಕೆ.ಜಿ.ದೀಪ್ತಿ ರಾಧಾಕೃಷ್ಣ, ಬಿ.ಎಸ್.ಸಾವಿತ್ರಿ, ಕೆ.ಮಹಮ್ಮದ್ ಜಮೀರ್, ಬಿ.ಪಿ.ರಂಗನಾಥ್, ರಮೇಶ್ ಇತರರಿದ್ದರು.