

ಸರಗೂರು: ತಾಲೂಕಿನ ಬಿದರಹಳ್ಳಿ ಗ್ರಾಮ ಪಂಚಾಯಿತಿಗೆ ಅಧ್ಯಕ್ಷೆಯಾಗಿ ನಾಗರತ್ನಾ ಜಾಣನಾಯಕ ಅವಿರೋಧವಾಗಿ ಅಯ್ಕೆಯಾಗಿದ್ದಾರೆ.
ರಾಣಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಡೆಯಿತು. ನಾಗರತ್ನಾ ಜಾಣನಾಯಕ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯೂ ಆದ ಕಬಿನಿ ಉಪವಿಭಾಗ ಅಧಿಕಾರಿ ಕೆ. ಉಷಾ ಅವಿರೋಧ ಆಯ್ಕೆಯನ್ನು ಘೋಷಿಸಿದರು.
ಗ್ರಾ.ಪಂ. ಮಾಜಿ ಅಧ್ಯಕ್ಷ ಅಧ್ಯಕ್ಷರಾದ ಬಿ.ಶಿವಣ್ಣ ಉಯ್ಯಂಬಳ್ಳಿ, ವೆಂಕಟಸ್ವಾಮಿ, ಪುಟ್ಟಮ್ಮ, ರಾಣಿ, ಉಪಾಧ್ಯಕ್ಷ ವಿಜಯ್ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಸತ್ಯ ಬಿದರಹಳ್ಳಿ, ಸದಸ್ಯರಾದ ಅಂಕನಾಯಕ, ರತ್ನಮ್ಮ ಉಯ್ಯಂಬಳ್ಳಿ, ರತ್ನಮ್ಮ ತೆರಣಿಮುಂಟಿ, ಸತೀಶ್, ಡಿ.ನೇತ್ರಾ, ಕುಮಾರ್ ಮೊಸರಹಳ್ಳ, ಚನ್ನನಾಯಕ ಬಸಾಪುರ, ರತ್ನಮ್ಮ ಬಸಾಪುರ, ದೇವಮ್ಮಣ್ಣಿ ಬಸಾಪುರ , ಗ್ರಾಪಂ ಅಭಿವೃದ್ಧಿ ಅಧಿಕಾರಿ ಜೆ. ಪರಮೇಶ್, ಮಹೇಶ್, ಶೇಖರ್, ತಿಮ್ಮರಾಜು ಇದ್ದರು.