ಬಿತ್ತನೆ ಭತ್ತಕ್ಕೆ ಸೂಕ್ತ ದರ ನೀಡದಿದ್ದರೆ ಪ್ರತಿಭಟನೆ

Davanagere, Rain, Sowing,
Published on

ಮೈಸೂರು: ಬೀಜೋತ್ಪಾದಕರಿಂದ ಈಗ ಪಡೆಯುವ ಭತ್ತದ ಬಿತ್ತನೆ ಬೀಜದ ದರ ಕಳೆದ ಸಾಲಿಗೆ ಹೋಲಿಸಿದಂತೆ ಕಡಿಮೆ ನಿಗದಿ ಮಾಡಿದೆ. ಒಂದು ವಾರದಲ್ಲಿ ಸೂಕ್ತ ದರ ನಿಗದಿ ಮಾಡದಿದ್ದಲ್ಲಿ ಬಂಡಿಪಾಳ್ಯದಲ್ಲಿರುವ ರಾಜ್ಯ ಬೀಜ ನಿಗಮದ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಕಲ್ಮಳ್ಳಿಯ ಬೀಜೋತ್ಪಾದಕರ ರೈತ ಪ್ರಭುಸ್ವಾಮಿ ಸರ್ಕಾರಕ್ಕೆ ಎಚ್ಚರಿಸಿದರು.

ಕಳೆದ ಸಾಲಿಗೆ ಹೋಲಿಸಿದಂತೆ ಈ ಸಲ ಜ್ಯೋತಿ ಭತ್ತಕ್ಕೆ 3,100 ರೂ. ಇದ್ದರೆ, ಕಳೆದ ಬಾರಿ 3,600 ರೂ. ಇತ್ತು. ಇದೇ ರೀತಿ ಇತರ ತಳಿಗಳಿಗೂ ಅತಿ ಕಡಿಮೆ ನಿಗದಿ ಮಾಡಲಾಗಿದೆ. ಹೀಗಾಗಿ ಬೀಜೋತ್ಪಾದನೆಗಾಗಿ ನೋಂದಣಿ ಶುಲ್ಕ, ಲೋಡ್-ಅನ್‌ಲೋಡ್, ಸಾಗಣೆ ವೆಚ್ಚ, ಇದರೊಡನೆ ನಿರ್ವಹಣೆಗಾಗಿ ವೆಚ್ಚ ಮಾಡಿರುವ ರೈತರಿಗೆ ಸಮಸ್ಯೆಯಾಗಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಅನೇಕರು ಸಾಲ ಮಾಡಿ ಈ ಭತ್ತ ಬೆಳೆದಿದ್ದು, ದರ ಕಡಿಮೆ ನಿಗದಿ ಮಾಡಿರುವುದರಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಸೂಕ್ತ ದರ ನಿಗದಿ ಮಾಡಬೇಕು. ಇಲ್ಲದಿದ್ದರೆ ಈಗಾಗಲೇ ತಾವು ಪೂರೈಸಿರುವ ಭತ್ತವನ್ನು ವಾಪಸ್ ನೀಡಬೇಕು ಎಂದೂ ಆಗ್ರಹಿಸಿದರು.

ಬೀಜೋತ್ಪಾದಕರ ರೈತರಾದ ಗುರುಸ್ವಾಮಿ ನಗರ್ಲೆ, ಎಚ್.ಮಹದೇವಸ್ವಾಮಿ ಪೂರಿಗಾಲಿ, ನಾಗೇಂದ್ರಸ್ವಾಮಿ ನಗರ್ಲೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net