

ಚಿತ್ರದುರ್ಗ: ಮುಂಗಾರು ಪೂರ್ವದಲ್ಲೇ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು,ರೈತರು ಬಿತ್ತನೆಗೆ ಸಿದ್ಧತೆ ನಡೆಸಿದ್ದಾರೆ. ಆದ್ದರಿಂದ ಬಿತ್ತನೆ ಬೀಜ, ಅ ಗತ್ಯ ರಸಗೊಬ್ಬರಗಳು ಕೊರತೆಯಾಗದಂತೆ ಕ್ರಮ ವಹಿಸಬೇಕೆಂದು ಎಡಿಸಿ ಬಿ.ಟಿ.ಕುಮಾರಸ್ವಾಮಿ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿ ದರು.
ಡಿಸಿ ಕಚೇರಿಯಲ್ಲಿ ಗುರುವಾರ ಪ್ರಸಕ್ತ ಸಾಲಿನ ಮುಂಗಾರು ಹಂಗಾಮು ಪೂರ್ವಸಿದ್ಧತೆ,ಬಿತ್ತನೆ ಬೀಜ ಮತ್ತು ರಸಗೊಬ್ಬರ ಇತ್ಯಾದಿ ಕೃ ಷಿ ಪರಿಕರಗಳ ಯೋಜನೆ ಮತ್ತು ಲಭ್ಯತೆ ಕುರಿತಂತೆ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿ, ಬಿತ್ತನೆ ಬೀಜ ಹಾಗೂ ರಸಗೊಬ್ಬರಕ್ಕೆ ರೈತರು ಸಾಲುಗಟ್ಟಿ ನಿಲ್ಲುವಂತಾಗಬಾರದು.ಕಾಳಸಂತೆಯಲ್ಲಿ ಹೆಚ್ಚಿನ ದರಕ್ಕೆ ಮಾರಾಟವಾಗುವುದನ್ನು ತಡೆಯ ಬೇಕು. ಬೇಡಿಕೆಗೆ ಅನುಸಾರವಾಗಿ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ದಾಸ್ತಾನಿರಬೇಕು.
ಕೃಷಿ ಇಲಾಖೆ ಜಮೀನು ಮಣ್ಣಿನ ಪರೀಕ್ಷೆ ನಡೆಸಿ,ಮಣ್ಣಿನ ಫಲವತ್ತತೆ ಆಧರಿಸಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಬಳಕೆಗೆ ಅಧಿಕಾರಿ ಗಳು ರೈತರಿಗೆ ಶಿಫಾರಸ್ಸು ಮಾಡಬೇಕು. ಇದರಿಂದ ಅನಾವಶ್ಯಕವಾಗಿ ಮಣ್ಣಿಗೆ ರಾಸಾಯನಿಕ ಗೊಬ್ಬರ ಸುರಿಯುವುದು ತಪ್ಪುತ್ತದೆ. ಇದ ರಿಂದ ರೈತರಿಗೆ ನಷ್ಟವಾಗದು. ಕೃಷಿಯೊಂದಿಗೆ ಪಶು ಸಂಗೋಪನೆ, ಸಮಗ್ರ ಬೇಸಾಯ ಪದ್ಧತಿಗೆ ಪ್ರೋತ್ಸಾಹಿಸಬೇಕು.ಕೊಟ್ಟಿಗೆ ಹಾಗೂ ಸಾ ವಯವ ಗೊಬ್ಬರಗಳ ಬಳಕೆಯಿಂದ ಮಣ್ಣಿನ ಫಲವತ್ತತೆ ಹಾಳಾಗದು,ಡಿಎಪಿಗೆ ಪರ್ಯಾಯ ಸಂಯುಕ್ತ ರಸ ಗೊಬ್ಬರಗಳ ಬಳಕೆಗೆ ಸಲಹೆ ನೀಡಬೇಕೆಂದರು.
ಜಿಲ್ಲೆಯಲ್ಲಿ ಈವರೆಗೆ ವಾಡಿಕೆಗಿಂತ ಅಧಿಕ ಮಳೆಯಾಗಿದೆ. 31454 ಕ್ವಿಂಟಾಲ್ ಬಿತ್ತನೆ ಬೀಜದ ಗುರಿ ಇದ್ದು,12,924 ಕ್ವಿಂಟಾಲ್ ಬಿತ್ತ ನೆ ಬೀಜದ ದಾಸ್ತಾನಿದೆ. ಜುಲೈ 2ನೇ ವಾರದವರೆಗೂ ಬಿತ್ತನೆಗೆ ಅವಕಾಶವಿದೆ ಎಂದು ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಡಾ.ಬಿ.ಮಂ ಜುನಾಥ್ ಹೇಳಿದರು.
ಜಿಲ್ಲೆಯಲ್ಲಿ 2026 ಮಾರ್ಚ್‌ವರೆಗೆ 94,546 ಮೆಟ್ರಿಕ್ ಟನ್ ರಸಗೊಬ್ಬರದ ಬೇಡಿಕೆ ನಿರೀಕ್ಷೆಯಿದೆ. 32,045 ಮೆಟ್ರಿಕ್ ಟನ್ ರಸ ಗೊಬ್ಬರ ದಾಸ್ತಾನಿದ್ದು,12,567 ಮೆಟ್ರಿಕ್‌ಟನ್ ಮಾರಾಟವಾಗಿದೆ. ಜಿಲ್ಲೆಯ 22 ರೈತಸಂಪರ್ಕ ಕೇಂದ್ರ ಹಾಗೂ 13 ಹೆಚ್ಚುವರಿ ವಿತರಣಾ ಕೇಂದ್ರಗಳಲ್ಲಿ ಸಹಾಯ ಧನದಡಿ ಬಿತ್ತನೆ ಬೀಜ ವಿತರಿಸಲಾಗುವುದು.
ಇದನ್ನು ಹೊರತುಪಡಿಸಿ 59 ಕೃಷಿಪತ್ತಿನ ಸಹಕಾರ ಸಂಘಗಳು,26 ರೈತ ಉತ್ಪಾದಕ ಸಂಸ್ಥೆಗಳು,283 ಖಾಸಗಿ ಮಾರಾಟಗಾರರು ಬಿತ್ತನೆ ಬೀಜ ಮಾರಾಟ ಮಾಡಲಿದ್ದಾರೆ. ಕಳಪೆ ಹಾಗೂ ಹೆಚ್ಚಿನ ದರಕ್ಕೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಮಾರಾಟ ಮಾಡದಂತೆ ಎಚ್ಚರಿಕೆ ನೀಡ ಲಾಗಿದೆ ಎಂದರು. ರೈತರ ಸಲಹೆ ನೀಡುವ ಕರ ಪತ್ರಗಳನ್ನು ಬಿಡುಗಡೆ ಮಾಡಿದ ಎಡಿಸಿ,ರಸಗೊಬ್ಬರ ಮಾರಾಟ ಮಾಡುವ ಪಿಒಎಸ್ ಯಂತ್ರಗಳಿ ಗೆ ಚಾಲನೆ ನೀಡಿದರು.
ಜಿಪಂ ಗಾಯಿತ್ರಿ,ಕೃಷಿ ಉಪ ನಿರ್ದೇಶಕ ಕೆ.ಎಸ್.ಶಿವಕುಮಾರ್,ಕೃಷಿ ಇಲಾಖೆ ಜಾರಿ ದಳದ ಸಹಾಯಕ ನಿರ್ದೇಶಕರಾದ ಜೆ. ಮಲ್ಲನ ಗೌಡ,ಉಲ್ಪತ್‌ಜೈಬ್,ಇಪ್ಕೋ ಕ್ಷೇತ್ರಾಧಿಕಾರಿ ಚಿದಂಬರಮೂರ್ತಿ,ಜಿಲ್ಲಾ ರಸಗೊಬ್ಬರ ಮಾರಾಟಗಾರರ ಯೂನಿಯನ್ ಅಧ್ಯಕ್ಷ ಜಿ.ಪಿ.ರೇ ವಣಸಿದ್ದಪ್ಪ ಇತರರು ಇದ್ದರು.