

ಮುರಗೋಡ: ರೆತರು ಶ್ರಮವಹಿಸಿ ದುಡಿದರೆ ಉತ್ತಮ ಸಲು ಪಡೆದು ಆರ್ಥಿಕ ಸಂಕಷ್ಟದಿಂದ ದೂರಾಗಬಹುದು ಎಂದು ಎಪಿಎಂಸಿ ಸದಸ್ಯ ರಾಜು ಕಲಾಲ ಹೇಳಿದರು.
ಸ್ಥಳಿಯ ರೆತ ಸಂಪರ್ಕ ಕೇಂದ್ರದಲ್ಲಿ ರೆತರಿಗೆ ಹಿಂಗಾರು ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು. ಸಮಯಕ್ಕೆ ಸರಿಯಾಗಿ ಸರ್ಕಾರದ ಸಹಾಯ ಧನದಲ್ಲಿ ವಿವಿಧ ಬಿತ್ತನೆ ಬೀಜ ವಿತರಣೆ ಮಾಡುತ್ತಿದ್ದು, ರೆತರು ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಕೃಷಿ ಅಧಿಕಾರಿ ಯಮನಪ್ಪ ಮಾದಿಗೇರ ಮಾತನಾಡಿ, ಹಿಂಗಾರು ಬಿತ್ತನೆಗೆ ಜೋಳ, ಕಡಲೆ, ಗೋಧಿ ಇತರ ಕಂಪನಿಯ ಗೋವಿನ ಜೋಳ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದ್ದು, ಮಳೆ ನೋಡಿಕೊಂಡು ಬಿತ್ತನೆ ಮಾಡಬೇಕು ಎಂದರು.
ಗ್ರಾಪಂ ಅಧ್ಯೆ ಸಂಕೇತಾ ಹಟ್ಟಿಹೊಳಿ, ಸವದತ್ತಿ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಶಿವಪ್ರಕಾಶ ಪಾಟೀಲ, ಶ್ರೀಶೆಲ ಮುರಬದ, ರಾಜು ಮರಮಣ್ಣವರ, ದುರ್ಗಪ್ಪ ಭಜಂತ್ರಿ, ಶ್ವೇತಾ ತೋಟಗಿ, ಮಂಜು ಗಿರೆನ್ನವರ, ಈರಣ್ಣ ಯರಝರ್ವಿ, ಪ್ರಕಾಶ ಹಟ್ಟಿಹೊಳಿ, ಶಿವು ಮಿಡಚಿ, ಮುದಕಪ್ಪ ಬೆಳಗಾವಿ, ಪ್ರವಿಣ ಕಾಜಗಾರ, ಮಹೇಶ ಕಿವಡಿ ಇತರರಿದ್ದರು.