

ಯಾದಗಿರಿ: ದೇಶದ ಆಯಾ ರಾಜ್ಯಗಳಲ್ಲಿ ಯಾವುದೇ ಬೆಳೆಗಳು ಬಿತ್ತನೆಗೂ ಮುನ್ನವೇ ಕೇಂದ್ರ ಸರಕಾರ ಬೆಂಬಲ ಬೆಲೆ ನಿಗದಿ ಪಡಿಸಿದರೇ ರೈತರಿಗೆ ಅನುಕೂಲವಾಗಲಿದೆ ಎಂದು ನಫೆಡ್ ಕನರ್ಾಟಕ ನಿದರ್ೇಶಕ ಗುರುನಾಥರೆಡ್ಡಿ ಪಾಟೀಲ ಹಳಿಸಗರ ಅವರು ಕೇಂದ್ರ ಗೃಹ ಸಚಿವ ಅಮಿತ್ ಅವರ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದ್ದಾರೆ.
ನವ ದೆಹಲಿಯಲ್ಲಿ ಗುರುವಾರ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಅವರೊಂದಿಗೆ ನಡೆದ ನಫೆಡ್ ಸಭೆಯಲ್ಲಿ ರಾಜ್ಯ ಸರಕಾರದ ಪ್ರತಿನಿಧಿಯಾಗಿ ಮಾಹಿತಿ ನೀಡಿರುವುದಾಗಿ ಪಾಟೀಲ ಹೇಳಿದ್ದಾರೆ. ಕೇಂದ್ರ ಸರಕಾರ ಪ್ರತಿಬಾರಿ ರೈತರು ಬಿತ್ತನೆ ಮಾಡಿ ಬೆಳೆ ಬೆಳದು ದಾಸ್ತಾನು ಬಂದ ನಂತರ ಬೆಂಬಲ ಬೆಲೆ ನೀಡುತ್ತಿದೆ. ಆದರೆ ರೈತರು ಅನಿವಾರ್ಯವಾಗಿ ತಾವು ಬೆಳೆದ ಬೆಳೆಗೆ ಸೂಕ್ತ ಬೆಲೆ ಇರದಿದ್ದರೂ ಮಾರಾಟ ಮಾಡಬೇಕಾಗುತ್ತದೆ.
ಇದರಿಂದಾಗಿ ರೈತರು ಸಂಕಷ್ಟಕ್ಕಿಡಾಗುತ್ತಿದ್ದಾರೆ. ಪ್ರತಿಬಾರಿ ಮಳೆಗಾಲ ಪೂರ್ವದಲ್ಲಿಯೇ ಆಯಾ ರಾಜ್ಯಗಳಲ್ಲಿ ಬಿತ್ತನೆ ಮಾಡಬಹುದಾದ ಬೆಳೆಗಳನ್ನು ಆಧರಿಸಿ ಸರಕಾರಕ್ಕೆ ಬೇಕಾಗುವ ದಾಸ್ತಾನು ಅನ್ವಯ ಬೆಂಬಲ ಬೆಲೆ ನಿಗಧಿಯಾದಲ್ಲಿ ರೈತರು ಆ ಬೆಳೆಗಳನ್ನು ಬಿತ್ತನೆ ಮಾಡಬಹುದಾಗಿದೆ. ಇದರಿಂದ ಹೊರ ದೇಶದಿಂದ ಆಮುದು ಮಾಡಿಕೊಳ್ಳುವುದು ತಪ್ಪುತ್ತದೆ.ಇಲ್ಲದಿದ್ದಲ್ಲಿ ರೈತರು ಬಿತ್ತನೆ ಮಾಡದೇ ಇರುವ ಬೆಳೆಗಳಿಗೆ ಹೆಚ್ಚಿನ ಬೆಲೆ ನೀಡಿದರೂ ಇಲ್ಲಿ ಲಭ್ಯವಿಲ್ಲದಂತಾಗಿ ಆಮುದು ಮೊರೆ ಹೋಗಬೇಕಾಗುತ್ತದೆ. ಕೂಡಲೇ ಈ ಪದ್ದತಿಯನ್ನು ಬದಲಾವಣೆ ಮಾಡಬೇಕೆಂದು "ನಂತಿ ಮಾಡಿರುವುದಾಗಿ ತಿಳಿಸಿದ್ದಾರೆ.