ಬಿಡುವು ನೀಡಿದ ಮಳೆ ಎಲ್ಲೆಡೆ ಯೂರಿಯಾ ಗೊಬ್ಬರಕ್ಕೆ ಹೆಚ್ಚಿದ ಬೇಡಿಕೆ

19 ಎಸ್ಕೆಪಿ 1 web 1
Published on

ಶಿಕಾರಿಪುರ: ಹದಿನೈದು ದಿನಗಳಿಂದ ಬಿಡದೇ ನಿರಂತರವಾಗಿ ಸುರಿಯುತ್ತಿದ್ದ ಮಳೆ ಮಂಗಳವಾರ ಸ್ವಲ್ಪ ಬಿಡುವು ಕೊಟ್ಟಿದ್ದು, ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದೆ.

15 ದಿನಗಳ ಹಿಂದೆ ಬಿತ್ತನೆಯಾದ ಮೆಕ್ಕೆಜೋಳ ಬಿಡದ ಮಳೆಯಿಂದ ಮೇಲೇಳುತ್ತಿಲ್ಲ. ಗದ್ದೆಯ ಹಾಳೆಗಳಲ್ಲಿ ನೀರು ನಿಂತು ಸಾಕಷ್ಟು ಜೌಗು ಆಗಿದೆ. ಮೆಕ್ಕೆಜೋಳ ಉಳಿಸಿಕೊಳ್ಳಲು ಯೂರಿಯಾ ಗೊಬ್ಬರದ ಅಗತ್ಯವಿದ್ದು, ರೈತರು ಮಂಗಳವಾರ ಮುಂಜಾನೆಯಿಂದಲೇ ಯೂರಿಯಾ ಗೊಬ್ಬರಕ್ಕೆ ಮುಗಿಬಿದ್ದಿದ್ದರು.

ಶಿಕಾರಿಪುರ ತಾಲೂಕಿನಲ್ಲಿ 2022ರ ಮುಂಗಾರು ಹಂಗಾಮಿನಲ್ಲಿ ಕಳೆದ 15 ದಿನಗಳಲ್ಲಿ 332 ಮಿ.ಮೀ. ಮಳೆ ಆಗಿದೆ. 157 ಮಿ.ಮೀ. ವಾಡಿಕೆ ಮಳೆಗೆ ಆಗುತ್ತಿತ್ತು. ಜೋರಾದ ಮಳೆಯ ಕಾರಣ ವಿವಿಧ ಹಂತದಲ್ಲಿರುವ ಮೆಕ್ಕೆಜೋಳ ಬೆಳೆಗೆ ರೈತರಿಗೆ ಸಕಾಲದಲ್ಲಿ ಅಂತರ ಬೇಸಾಯ ಮತ್ತು ಯೂರಿಯಾ ಮೇಲು ಗೊಬ್ಬರ ನೀಡಲು ಸಾಧ್ಯವಾಗಿಲ್ಲ. ಸೋಮವಾರ ಮತ್ತು ಮಂಗಳವಾರ ಮಳೆಯ ಪ್ರಮಾಣ ತಗ್ಗಿದ್ದು, ಸೂರ್ಯನ ದರ್ಶನವಾಗಿದೆ. ಇದರಿಂದಾಗಿ ಮಳೆ ಬಿಡುವು ನೀಡುತ್ತಿದ್ದಂತೆ ರೈತರು ಯೂರಿಯಾ ಖರೀದಿಗೆ ಮುಂದಾಗಿದ್ದಾರೆ. ಜಮೀನಿನಲ್ಲಿ ನಿಂತಿರುವ ನೀರು ಬಸಿದು ಹೋಗುವಂತೆ ಪಾತಿ ಮಾಡಿ ತೇವಾಂಶವನ್ನು ಹೊರಹಾಕುತ್ತಿರುವ ದೃಶ್ಯ ಕಂಡುಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net